
ನವದೆಹಲಿ, 21 ನವೆಂಬರ್ (ಹಿ.ಸ.):
ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರ ಆಗ್ರಾದ ತಾಜ್ಮಹಲ್ ಭೇಟಿಯ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿಲ್ಲ. ಆದರೆ ಭದ್ರತಾ ಕಾರಣಗಳಿಂದಾಗಿ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗಿಲ್ಲ.
ಈ ಕುರಿತು ಸರ್ಕಾರಿ ಮೂಲಗಳು ಶನಿವಾರ ಮಾಹಿತಿ ನೀಡಿದ್ದು, ಪಾಕಿಸ್ತಾನ ಸಚಿವರಿಗೆ ತಾಜ್ಮಹಲ್ ವೀಕ್ಷಿಸಲು ಭಾರತೀಯ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿವೆ. ತಾಜ್ಮಹಲ್ ಭೇಟಿಗೆ ಅನುಮತಿ ನಿರಾಕರಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ದೆಹಲಿಯಲ್ಲಿ ಪಾಕಿಸ್ತಾನದ ನಿಯೋಗದ ಪ್ರವಾಸ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸರ್ಕಾರಿ ಮೂಲಗಳು, ಭದ್ರತಾ ಸಂಸ್ಥೆಗಳಿಂದ ಅನುಮತಿ ದೊರೆತಿರುವ ರಾಜಧಾನಿಯ ಪ್ರಮುಖ ಸ್ಥಳಗಳಿಗೆ ನಿಯೋಗ ಭೇಟಿ ನೀಡಲಿದೆ ಎಂದು ತಿಳಿಸಿವೆ. ಐತಿಹಾಸಿಕ ಹುಮಾಯೂನ್ ಸಮಾಧಿ ಮತ್ತು ದೆಹಲಿ ಹಾಟ್ ಈ ಭೇಟಿಯ ಪಟ್ಟಿಯಲ್ಲಿವೆ.
ಆದರೆ ಭದ್ರತಾ ಕಾರಣಗಳಿಂದ ಹಜರತ್ ನಿಜಾಮುದ್ದೀನ್ ದರ್ಗಾ ಭೇಟಿಗೆ ಅನುಮತಿ ನೀಡಲಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರು ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿಯೋಗದೊಂದಿಗೆ ನವದೆಹಲಿಗೆ ಆಗಮಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.