ಪಂಜಾಬ್ ನ ಮೂವರು ಆಪ್ ಶಾಸಕರು ಬಿಜೆಪಿ ಸೇರ್ಪಡೆ
ನವದೆಹಲಿ, 02 ನವೆಂಬರ್ (ಹಿ.ಸ.): ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಮೂವರು ಬಂಡಾಯ ಶಾಸಕರು ಸೋಮವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಕುಂವರ್ ವಿಜಯ್ ಪ್ರತಾಪ್ ಸಿಂಗ್, ಚೇತನ್ ಸಿಂಗ್ ಜೌರಮಾಜ್ರಾ ಮತ್ತು ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ಅವರು ನವದೆಹಲಿಯ ಬಿಜ
आ आ पा के तीन विधायक भाजपा में शामिल


ನವದೆಹಲಿ, 02 ನವೆಂಬರ್ (ಹಿ.ಸ.):

ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಮೂವರು ಬಂಡಾಯ ಶಾಸಕರು ಸೋಮವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾಗಿದ್ದಾರೆ.

ಕುಂವರ್ ವಿಜಯ್ ಪ್ರತಾಪ್ ಸಿಂಗ್, ಚೇತನ್ ಸಿಂಗ್ ಜೌರಮಾಜ್ರಾ ಮತ್ತು ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ಅವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಉಸ್ತುವಾರಿ ಸತೀಶ್ ಪೂನಿಯಾ, ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಮತ್ತು ಬಿಜೆಪಿ ನಾಯಕ ವೀರೇಂದ್ರ ಸಚ್‌ದೇವ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಭಾನುವಾರ ಚೇತನ್ ಸಿಂಗ್ ಜೌರಮಾಜ್ರಾ ಮತ್ತು ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕುಂವರ್ ವಿಜಯ್ ಪ್ರತಾಪ್ ಸಿಂಗ್ ಸೋಮವಾರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕುಂವರ್ ವಿಜಯ್ ಪ್ರತಾಪ್ ಸಿಂಗ್ ಅಮೃತಸರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ನಿವೃತ್ತ ಪೊಲೀಸ್ ಅಧಿಕಾರಿ. ಚೇತನ್ ಸಿಂಗ್ ಜೌರಮಾಜ್ರಾ ಸಮಾಣಾ ಕ್ಷೇತ್ರದ ಶಾಸಕರಾಗಿದ್ದು, ಈ ಹಿಂದೆ ಪಂಜಾಬ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ಸನೌರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಸಂಘಟನಾತ್ಮಕ ಹಾಗೂ ರಾಜಕೀಯ ಸವಾಲಾಗಿ ಪರಿಣಮಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande