ಅಂಕಗಳಾಚೆಗೆ ಬದುಕಿನ ಯಶಸ್ಸು: ವಿದ್ಯಾರ್ಥಿಗಳು ಆತ್ಮವಿಶ್ವಾಸಿಗಳಾಗಬೇಕು
ಬಳ್ಳಾರಿ, 18 ನವೆಂಬರ್ (ಹಿ.ಸ.) ವಿದ್ಯಾರ್ಥಿಗಳ ಯಶಸ್ಸು ಪರೀಕ್ಷೆಯ ಅಂಕಗಳು ಮತ್ತು ಶೈಕ್ಷಣಿಕ ಸಾಧನೆಗಳಿಗೆ ಸೀಮಿತವಾಗದೆ, ಮಾನಸಿಕ ಸದೃಢತೆ, ಆತ್ಮವಿಶ್ವಾಸ, ಭಾವನಾತ್ಮಕ ಸಮತೋಲನ ಹಾಗೂ ಜೀವನ ಕೌಶಲ್ಯಗಳನ್ನೂ ಒಳಗೊಂಡಿರಬೇಕು ಎಂದು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ನ ಮೇನೇಜರ್, ಅಂತಾರಾಷ್ಟ್ರೀಯಮಟ್ಟದ ವೃತ್
ಅಂಕಗಳಾಚೆಗೆ ಬದುಕಿನ ಯಶಸ್ಸು: ವಿದ್ಯಾರ್ಥಿಗಳು ಆತ್ಮವಿಶ್ವಾಸಿಗಳಾಗಬೇಕು


ಅಂಕಗಳಾಚೆಗೆ ಬದುಕಿನ ಯಶಸ್ಸು: ವಿದ್ಯಾರ್ಥಿಗಳು ಆತ್ಮವಿಶ್ವಾಸಿಗಳಾಗಬೇಕು


ಅಂಕಗಳಾಚೆಗೆ ಬದುಕಿನ ಯಶಸ್ಸು: ವಿದ್ಯಾರ್ಥಿಗಳು ಆತ್ಮವಿಶ್ವಾಸಿಗಳಾಗಬೇಕು


ಬಳ್ಳಾರಿ, 18 ನವೆಂಬರ್ (ಹಿ.ಸ.)

ವಿದ್ಯಾರ್ಥಿಗಳ ಯಶಸ್ಸು ಪರೀಕ್ಷೆಯ ಅಂಕಗಳು ಮತ್ತು ಶೈಕ್ಷಣಿಕ ಸಾಧನೆಗಳಿಗೆ ಸೀಮಿತವಾಗದೆ, ಮಾನಸಿಕ ಸದೃಢತೆ, ಆತ್ಮವಿಶ್ವಾಸ, ಭಾವನಾತ್ಮಕ ಸಮತೋಲನ ಹಾಗೂ ಜೀವನ ಕೌಶಲ್ಯಗಳನ್ನೂ ಒಳಗೊಂಡಿರಬೇಕು ಎಂದು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ನ ಮೇನೇಜರ್, ಅಂತಾರಾಷ್ಟ್ರೀಯಮಟ್ಟದ ವೃತ್ತಿಮಾರ್ಗದರ್ಶಕ ಸಚಿನ್ ಕುಮಾರ್ ಪಾಟೀಲ್ ಅವರು ತಿಳಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ `ಮೆಂಟರಿಂಗ್ ಮತ್ತು ಕೌನ್ಸೆಲಿಂಗ್ ಸೆಲ್' ಬುಧವಾರ ಏರ್ಪಡಿಸಿದ್ದ `ಅಂಕಗಳಾಚೆಗೆ: ಜೀವನ ಮತ್ತು ಯಶಸ್ಸಿಗೆ ಮನಸ್ಸಿನ ಜಾಗೃತಿ' ವಿಷಯದ ಉಪನ್ಯಾಸದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಬೆಳವಣಿಗೆಗೂ ಆದ್ಯತೆ ನೀಡಬೇಕು. ಪರೀಕ್ಷೆಗಳ ಒತ್ತಡ, ಉದ್ಯೋಗದ ಸ್ಪರ್ಧೆ, ಭವಿಷ್ಯದ ಅನಿಶ್ಚಿತತೆ ಹಾಗೂ ಸಾಮಾಜಿಕ ಒತ್ತಡಗಳನ್ನು ಸಮರ್ಥವಾಗಿ ಎದುರಿಸಲು ಮನಸ್ಸಿನ ಜಾಗೃತಿ ಮತ್ತು ಸ್ವಯಂ ಅರಿವು ಅತ್ಯಂತ ಅಗತ್ಯ ಎಂದರು.

ಮೈಂಡ್ಫುಲ್ನೆಸ್ ಅಭ್ಯಾಸವು ಪ್ರಸ್ತುತ ಕ್ಷಣದ ಬಗ್ಗೆ ಜಾಗೃತರಾಗಿರಲು, ಆಲೋಚನೆ ಮತ್ತು ಭಾವನೆಗಳನ್ನು ಸಮತೋಲನದಿಂದ ನಿರ್ವಹಿಸಲು ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮಥ್ರ್ಯ ಮತ್ತು ಕೌಶಲ್ಯಗಳನ್ನು ಆಧರಿಸಿ

ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸೋಲು ಮತ್ತು ಸವಾಲುಗಳನ್ನು ನಿರಾಶೆಯಾಗಿ ಪರಿಗಣಿಸದೆ, ಕಲಿಕೆ ಮತ್ತು ಬೆಳವಣಿಗೆಯ ಅವಕಾಶಗಳನ್ನಾಗಿ ಸ್ವೀಕರಿಸಬೇಕು ಎಂದರು.

ಪ್ರಾಂಶುಪಾಲ ಡಾ. ಕೋರಿ ನಾಗರಾಜ್ ಅವರು, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ತಾಂತ್ರಿಕ ಜ್ಞಾನದ ಜೊತೆಗೆ ಮಾನಸಿಕ ಆರೋಗ್ಯ, ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ವೃತ್ತಿಪರ ಸಾಮಥ್ರ್ಯಗಳ ಅಭಿವೃದ್ಧಿಯೂ ಅತ್ಯಗತ್ಯವಾಗಿದೆ ಎಂದರು.

ಉಪಪ್ರಾಂಶುಪಾಲರಾದ ಡಾ. ದೊಡ್ಡಬಸವನಗೌಡ ಮತ್ತು ಡಾ.ಸವಿತಾ ಸೋನೋಳಿ ಅವರು, ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮಥ್ರ್ಯವನ್ನು ಗುರುತಿಸಿಕೊಂಡು ನಿರಂತರ ಕಲಿಕೆ, ಸಮಯ ನಿರ್ವಹಣೆ ಮತ್ತು ಸಕಾರಾತ್ಮಕ ಚಿಂತನೆಯ ಮೂಲಕ ಜೀವನದ ಸವಾಲುಗಳನ್ನು ಎದುರಿಸಬೇಕು ಎಂದು ತಿಳಿಸಿದರು. ಅಂಕಗಳ ಒತ್ತಡಕ್ಕೆ ಒಳಗಾಗದೆ ಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಮೆಂಟರಿಂಗ್ ಮತ್ತು ಕೌನ್ಸೆಲಿಂಗ್ ಸೆಲ್ನ ಸಂಚಾಲಕರಾದ ಡಾ. ಮನಸಾ ಕೆ.ಸಿ. ಹಾಗೂ ಡಾ. ಶೀಲಾ ಬಿ.ಪಿ., ಸಹ ಪ್ರಾಧ್ಯಾಪಕರು ಅವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande