ನವೆಂಬರ್ 27 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಬಳ್ಳಾರಿ, 18 ನವೆಂಬರ್ (ಹಿ.ಸ.) ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನವೆಂಬರ್ 27 ರಂದು ‘ನಿಧಿ ಆಪ್ಕೆ ನಿಕಟ್'' (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂ
ನವೆಂಬರ್ 27 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ


ಬಳ್ಳಾರಿ, 18 ನವೆಂಬರ್ (ಹಿ.ಸ.)

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನವೆಂಬರ್ 27 ರಂದು ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ನಿಗದಿತ ಸ್ಥಳಗಳಲ್ಲಿ ಕಾರ್ಯಕ್ರಮ ಜರುಗಲಿದೆ.

ಬಳ್ಳಾರಿ ಜಿಲ್ಲೆ: ಲೋಹಗಿರಿ ಇಂಡಸ್ಟಿಸ್ (ಪ್ರೆವೇಟ್) ಲಿಮಿಟೆಡ್, ಸಂಡೂರು.

ವಿಜಯನಗರ ಜಿಲ್ಲೆ: ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಹೊಸಪೇಟೆ.

ಕೊಪ್ಪಳ ಜಿಲ್ಲೆ: ಎಂ.ಎಸ್. ಮೆಟಲ್ಸ್ ಅಂಡ್ ಸ್ಟೀಲ್ಸ್ ಪ್ರೆöÊವೇಟ್ ಲಿಮಿಟೆಡ್, ಕೊಪ್ಪಳ.

ಚಿತ್ರದುರ್ಗ ಜಿಲ್ಲೆ: ಸೇಂಟ್ ಆಂಟನೀಸ್ ಹೈಯರ್ ಪ್ರೆಮರಿ ಸ್ಕೂಲ್, ಹೊಸದುರ್ಗ.

ಈ ಕಾರ್ಯಕ್ರಮವು ಕಾರ್ಮಿಕರು, ಪಿಂಚಣಿದಾರರು ಹಾಗೂ ಉದ್ಯೋಗದಾತರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ನೇರ ಮಾಹಿತಿ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಿದೆ. ಇದರ ಜೊತೆಗೆ ಉದ್ಯೋಗದಾತರ ಕರ್ತವ್ಯ-ಜವಾಬ್ದಾರಿಗಳ ಅರಿವು, ಲಭ್ಯವಿರುವ ಆನ್ಲೈನ್ ಸೇವೆಗಳು ಹಾಗೂ ನೂತನ ಸುಧಾರಣೆಗಳ ಕುರಿತು ಮಾಹಿತಿ ಒದಗಿಸಲಾಗುತ್ತದೆ.

ಸಂಬ0ಧಪಟ್ಟ ಎಲ್ಲಾ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಸಮೀಪದ ಕೇಂದ್ರಕ್ಕೆ ಹಾಜರಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ. ಪ್ರವೀಣ್ ಅವರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande