ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಂಚು:ರಾಹುಲ್ ಗಾಂಧಿ ವಿರುದ್ಧ ಜೆ.ಪಿ. ನಡ್ಡಾ ವಾಗ್ದಾಳಿ
ನವದೆಹಲಿ, 01 ನವೆಂಬರ್ (ಹಿ.ಸ.): ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿ ಮೈತ್ರಿಕೂಟ ಆಯೋಜಿಸಿರುವ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮಲೀಲಾ ಮ
केंद्रीय मंत्री जेपी नड्डा


ನವದೆಹಲಿ, 01 ನವೆಂಬರ್ (ಹಿ.ಸ.):

ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿ ಮೈತ್ರಿಕೂಟ ಆಯೋಜಿಸಿರುವ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಜಾಪ್ರಭುತ್ವದ ಬಗೆಗಿನ ಗೌರವದ ಸಂಕೇತವಲ್ಲ. ಬದಲಾಗಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶವನ್ನು ಅರಾಜಕತೆಯತ್ತ ತಳ್ಳುವ ಪೂರ್ವಯೋಜಿತ ಸಂಚು ಎಂದು ಅವರು ಆರೋಪಿಸಿದ್ದಾರೆ.

ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ನಡ್ಡಾ, ಜನರಿಂದ ಪದೇಪದೆ ತಿರಸ್ಕೃತಗೊಂಡವರು ನಡೆಸುತ್ತಿರುವ ವ್ಯವಸ್ಥಿತ ನಾಟಕ ಇದಾಗಿದೆ. ಜನರಿಗೆ ಈ ಸತ್ಯ ಚೆನ್ನಾಗಿ ಅರ್ಥವಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ರಾಜಕೀಯ ಮಾದರಿಯನ್ನು ವಿವರಿಸಿದ ಅವರು, ಮೊದಲ ಹಂತದಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವುದು, ಎರಡನೇ ಹಂತದಲ್ಲಿ ಬೀದಿಗಳಲ್ಲಿ ಅರಾಜಕತೆ ಹಾಗೂ ಅವ್ಯವಸ್ಥೆ ಸೃಷ್ಟಿಸುವುದು, ಮೂರನೇ ಹಂತದಲ್ಲಿ ದೇಶದ ಆರ್ಥಿಕತೆಗೆ ಹಾನಿ ಮಾಡುವುದು ಮತ್ತು ನಾಲ್ಕನೇ ಹಂತದಲ್ಲಿ ವಿದೇಶಿ ಶಕ್ತಿಗಳ ಸೂಚನೆಯಂತೆ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದು ಈ ರಾಜಕೀಯ ತಂತ್ರದ ಭಾಗಗಳಾಗಿವೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಹಾಗೂ ಇಂಡಿ ಮೈತ್ರಿಕೂಟ ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದ ಶಾಂತಿ, ಆರ್ಥಿಕತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ರಾಜಕೀಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಡ್ಡಾ ದೂರಿದ್ದಾರೆ.

ಕಾಂಗ್ರೆಸ್ ನವೆಂಬರ್ ತಿಂಗಳ ಕರಾಳ ಇತಿಹಾಸವನ್ನು ಮರೆಮಾಚಲು ಸಾಧ್ಯವಿಲ್ಲ. ದೆಹಲಿಯ ವ್ಯಾಪಾರಿಗಳ ಕಣ್ಣೀರಿಗೂ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಭಾರತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದು ಗಲಭೆ ಆಧಾರಿತ ರಾಜಕಾರಣದಿಂದ ನಡೆಯುವುದಿಲ್ಲ. ಸಂವಿಧಾನ ಮತ್ತು ಜನರ ಜನಾದೇಶದ ಆಧಾರದ ಮೇಲೆ ದೇಶ ಮುನ್ನಡೆಯಲಿದೆ ಎಂದು ಹೇಳಿದ್ದಾರೆ.

ರಾಮಲೀಲಾ ಮೈದಾನದ ಈ ಸಮಾವೇಶ ಕಾಂಗ್ರೆಸ್ ಪಕ್ಷದ ರಾಜಕೀಯ ಅವನತಿಯ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಲಿದೆ ಎಂದು ಜೆ.ಪಿ. ನಡ್ಡಾ ಟೀಕಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande