ಮಧ್ಯ - ಮಾದಕ ಪದಾರ್ಥಗಳಿಂದ ದೂರವಿದ್ದು ಆರೋಗ್ಯವಾಗಿರಿ : ಕಲ್ಯಾಣಶ್ರೀಗಳು
ಬಳ್ಳಾರಿ, 09 ಅಕ್ಟೋಬರ್ (ಹಿ.ಸ.) ಮಧ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಕಮ್ಮರಬೇಡು ಕಲ್ಯಾಣಮಠದ ಕಲ್ಯಾಣಶ್ರೀಗಳು ತಿಳಿಸಿದ್ದಾರೆ. ರಾಘವಕಲಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್,
ಮಧ್ಯ - ಮಾದಕ ಪದಾರ್ಥಗಳಿಂದ ದೂರವಿದ್ದು ಆರೋಗ್ಯವಾಗಿರ್ರಿ : ಕಲ್ಯಾಣಶ್ರೀಗಳು


ಮಧ್ಯ - ಮಾದಕ ಪದಾರ್ಥಗಳಿಂದ ದೂರವಿದ್ದು ಆರೋಗ್ಯವಾಗಿರ್ರಿ : ಕಲ್ಯಾಣಶ್ರೀಗಳು


ಬಳ್ಳಾರಿ, 09 ಅಕ್ಟೋಬರ್ (ಹಿ.ಸ.)

ಮಧ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಕಮ್ಮರಬೇಡು ಕಲ್ಯಾಣಮಠದ ಕಲ್ಯಾಣಶ್ರೀಗಳು ತಿಳಿಸಿದ್ದಾರೆ.

ರಾಘವಕಲಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಬಳ್ಳಾರಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ಗಾಂಧಿಸ್ಮøತಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ವ್ಯಸನಮುಕ್ತರಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಧ್ಯ ಮತ್ತು ಮಾದಕಪದಾರ್ಥಗಳು ಆರೋಗ್ಯವನ್ನು ಹಾಳು ಮಾಡುವುದರ ಜತೆಗೆ ಕುಟುಂಬದ ನೆಮ್ಮದಿ, ಶಾಂತಿ, ಆರ್ಥಿಕ ಸ್ಥಿತಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತವೆ. ಕಾರಣ ಈ ವಿಷಗಳಿಂದ ಪ್ರತಿಯೊಬ್ಬರೂ ದೂರವೇ ಇರಬೇಕು ಎಂದರು.

ಮಹಾತ್ಮ ಗಾಂಧೀಜಿ ಅವರು ದುಶ್ಚಟಮುಕ್ತ ಹಾಗೂ ಸ್ವಾಸ್ಥ್ಯ ಸಮಾಜದ ಕನಸು ಕಂಡಿದ್ದರು. ಗಾಂಧೀಜಿ ಅವರ ಆದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮದ್ಯ, ತಂಬಾಕು ಹಾಗೂ ಮಾದಕ ಪದಾರ್ಥಗಳಂಥಹ ದುಶ್ಚಟಗಳು ವ್ಯಕ್ತಿಯ ಬದುಕನ್ನು ನಿಧಾನವಾಗಿ ನಾಶಪಡಿಸಿ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುವುದನ್ನು ತಪ್ಪಿಸಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಜಿಲ್ಲಾ ವ್ಯವಸ್ಥಾಪಕರಾದ ರೋಹಿತಾಕ್ಷ ಅವರು, ವ್ಯಸನದಾಸಿಗಳನ್ನು ವ್ಯವನಮುಕ್ತರನ್ನಾಗಿ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಗುರಿ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವ್ಯಸನಮುಕ್ತರಾದವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಂ. ಭಾಸ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕಚೇರಿ ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಅವರು ಆಶಯ ಭಾಷಣ ಮಾಡಿದರು.

ಬಳ್ಳಾರಿ ಧರ್ಮಾಧ್ಯಕ್ಷರಾದ ಡಾ. ಹೆನ್ರಿ ಡಿ'ಸೋಜ, ಧರ್ಮಗುರುಗಳಾದ ಹಜರತ್ ಖಾಜಿ ಮಹ್ಮದ್ ಸಿದ್ದಿಕಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಮಾಹಾಂತೇಶ್, ರಾಘವ ಕಲಾ ಮಂದಿರದ ಅಧ್ಯಕ್ಷ ಕೋಟೇಶ್ವರ್ ರಾವ್ ಹಾಗೂ ರೋಟರಿ ಕ್ಲಬ್ ಬಳ್ಳಾರಿ ಅಧ್ಯಕ್ಷ ಜಿ. ರಾಘವೇಂದ್ರ ರೆಡ್ಡಿ, ಹಾಗೂ ಧರ್ಮಸ್ಥಳ ಟ್ರಸ್ಟ್ನ ಬಸವರಾಜ್, ಮೌನೇಶ್, ಸತೀಶ್, ಆಶಾ ಸೇರಿ ಅನೇಕರು ವೇದಿಕೆಯಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande