ಜಾಗತಿಕ ಮಾರುಕಟ್ಟೆಗೆ ರಾಜ್ಯದ ಬಟ್ಟೆ ಉದ್ಯಮ: ಅ.8ರಂದು ಬೆಂಗಳೂರಿನಲ್ಲಿ ಜವಳಿ ರಫ್ತು ಶೃಂಗಸಭೆ
ಬೆಂಗಳೂರು, 06 ಅಕ್ಟೋಬರ್ (ಹಿ.ಸ.): ರಾಜ್ಯದ ಜವಳಿ ಮತ್ತು ಬಟ್ಟೆ ಉದ್ಯಮವನ್ನು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಅ.8ರಂದು ಜವಳಿ ರಫ್ತು ಹಾಗೂ ಫ್ಯಾಷನ್ ಉದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಶೆರಟನ್ ಗ
ಜಾಗತಿಕ ಮಾರುಕಟ್ಟೆಗೆ ರಾಜ್ಯದ ಬಟ್ಟೆ ಉದ್ಯಮ: ಅ.8ರಂದು ಬೆಂಗಳೂರಿನಲ್ಲಿ ಜವಳಿ ರಫ್ತು ಶೃಂಗಸಭೆ


ಬೆಂಗಳೂರು, 06 ಅಕ್ಟೋಬರ್ (ಹಿ.ಸ.):

ರಾಜ್ಯದ ಜವಳಿ ಮತ್ತು ಬಟ್ಟೆ ಉದ್ಯಮವನ್ನು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಅ.8ರಂದು ಜವಳಿ ರಫ್ತು ಹಾಗೂ ಫ್ಯಾಷನ್ ಉದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಶೆರಟನ್ ಗ್ರ್ಯಾಂಡ್ನಲ್ಲಿ ಅ.7 ಮತ್ತು 8ರಂದು ‘ಅಪ್ಯಾರಲ್ ಸೋರ್ಸಿಂಗ್ ವೀಕ್ 2026’ ಆಯೋಜಿಸಲಾಗಿದೆ.

ಜಾಗತಿಕ ಮಟ್ಟದ ಬ್ರ್ಯಾಂಡ್ಗಳು, ತಯಾರಕರು, ಖರೀದಿದಾರರು, ರಿಟೇಲರ್ಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಜವಳಿ ಮತ್ತು ಉಡುಪು ತಯಾರಿಕೆ, ಜಾಗತಿಕ ಸೋರ್ಸಿಂಗ್, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ , ಸುಸ್ಥಿರ ಉತ್ಪಾದನೆ ಹಾಗೂ ಪೂರೈಕೆ ಸರಪಳಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಅ.8ರಂದು ವೇಗವಾದ ಮತ್ತು ಸುಸ್ಥಿರ ಪೂರೈಕೆ ಸರಪಳಿ, ಡಿಜಿಟಲ್ ಉತ್ಪಾದನೆ ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ವಿಶೇಷ ಗೋಷ್ಠಿಗಳೂ ನಡೆಯಲಿವೆ.

ಈ ವೇದಿಕೆಯ ಮೂಲಕ ರಾಜ್ಯದ ಜವಳಿ ಹಾಗೂ ಬಟ್ಟೆ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ಖರೀದಿದಾರರು ಮತ್ತು ಬ್ರ್ಯಾಂಡ್ಗಳೊಂದಿಗೆ ನೇರ ಸಂಪರ್ಕ ಸಾಧಿಸಲು, ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಹಾಗೂ ರಫ್ತು ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯಲಿದೆ.

“ಭಾರತದ ಜವಳಿ ಮತ್ತು ಉಡುಪು ಕ್ಷೇತ್ರವನ್ನು ಜಾಗತಿಕ ಸೋರ್ಸಿಂಗ್ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವುದು, ತಯಾರಕರು ಮತ್ತು ಜಾಗತಿಕ ಬ್ರ್ಯಾಂಡ್ಗಳ ನಡುವೆ ನೇರ ಸಂಪರ್ಕ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ,” ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ ಜಾಗತಿಕ ಮಟ್ಟದ ಖರೀದಿದಾರರು ಮತ್ತು ಉದ್ಯಮ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಜವಳಿ ಕ್ಷೇತ್ರದ ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande