
ಕೋಲಾರ, 06 ಅಕ್ಟೋಬರ್ (ಹಿ.ಸ) : ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಂಧ್ರಪ್ರದೇಶದಲ್ಲಿ ನವೆಂಬರ್ ೧೪ರಂದು ರಾಷ್ಟ್ರೀಯ ಮಟ್ಟದ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಲುವಾಗಿ ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ ೦೯ ರಂದು ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಆಯ್ಕೆ ಸ್ಪರ್ಧೆಯಲ್ಲಿ ೧೪ ವರ್ಷ ಹಾಗೂ ೧೬ ವರ್ಷ ವಯೋಮಿತಿಯ ಬಾಲಕ–ಬಾಲಕಿಯರು ಭಾಗವಹಿಸಬಹುದಾಗಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಮಾರ್ಗಸೂಚಿಯಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಕೋಲಾರ ಜಿಲ್ಲೆಯನ್ನು ಪ್ರತಿನಿಧಿಸಲು ಅವಕಾಶ ಪಡೆಯಲಿದ್ದಾರೆ.
೧೪ ವಯೋಮಿತಿ ೧೭-೧೧-೨೦೧೨ ರಿಂದ ೧೬-೧೧-೨೦೧೪ರ ನಡುವೆ ಜನಿಸಿದ ಬಾಲಕ–ಬಾಲಕಿಯರು, ೧೬ ವಯೋಮಿತಿ೧೭-೧೧-೨೦೧೦ ರಿಂದ ೧೬-೧೧-೨೦೧೨ರ ನಡುವೆ ಜನಿಸಿದ ಬಾಲಕ–ಬಾಲಕಿಯರು. ಕ್ರೀಡಾಕೂಟದಲ್ಲಿ ೬೦ ಮೀ., ೮೦ ಮೀ., ೬೦೦ ಮೀ., ಹೈಜಂಪ್, ಲಾಂಗ್ ಜಂಪ್, ಶಾಟ್ಪುಟ್, ಜಾವೆಲಿನ್ ಥ್ರೋ ಹಾಗೂ ಟ್ರಯಾಥ್ಲಾನ್/ಪೆಂಟಾಥ್ಲಾನ್ ಸೇರಿದಂತೆ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್