
ಕೋಲಾರ, ೨೮ ಅಕ್ಟೋಬರ್ (ಹಿ.ಸ) : ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ತೀವ್ರಗೊಂಡಿದೆ. ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯ ಮಲಂಪಲ್ಲಿ ಗ್ರಾಮದ ಸರ್ವೇ ನಂಬರ್ ೩೫ರಲ್ಲಿ ೧೯೩೬ರ ಕಂದಾಯ ಮತ್ತು ಅರಣ್ಯ ಇಲಾಖೆಯ ಸೆಟಲ್ಮೆಂಟ್ ಕಾಫಿ ಯಲ್ಲಿಯೂ ೨೫ ಎಕರೆ ೩೦ ಕುಂಟೆ ಜಮೀನು ಸರ್ಕಾರಿ ಜಮೀನಾಗಿದ್ದು ಈ ಜಮೀನನ್ನು ಹತ್ತಾರು ದಶಕಗಳಿಂದ ಉಪ್ಪರಪಲ್ಲಿ ಗ್ರಾಮದ ೧೯ ಜನ ದಲಿತ ಕುಟುಂಬಗಳ ರೈತರು ಸಾಗುವಳಿ ಮಾಡುತ್ತಿದ್ದರು. ಆದರೆ ಅಕ್ರಮವಾಗಿ ಇಲಾಖೆ ಅಧಿಕಾರಿಗಳು ಅರಣ್ಯಭೂಮಿಯನ್ನು ಮಂಜೂರು ಮಾಡಿದ್ದಾರೆ. ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ ಕಂದಾಯ ಇಲಾಖೆ ಜಮೀನು ಮಂಜೂರು ಮಾಡಿದ್ದು, ಒತ್ತುವರಿ ತೆರವುಗೊಳಿಸಲು ಅರಣ್ಯ ಇಲಾಖೆ ಕಳೆದ ಮೂರು ದಿನಗಳಿಂದ ಪ್ರಯತ್ನಿಸತ್ತಿದೆ.
ಆದರೆ ರೈತರು ಪ್ರತಿರೋಧ ಒಡ್ಡಿದ ಕಾರಣ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಬೆಂಗಾವಲಿಯಲ್ಲಿ ತೆರಳಿ ಒತ್ತುವರಿ ತೆರವುಗೊಳಿಸಲು ಮುಂದಾದರು. ಆದರೆ, ಮಲ್ಲಂಪಲ್ಲಿ ಗ್ರಾಮದ ಚಲಪತಿ ಎಂಬ ವ್ಯಕ್ತಿ ಮಚ್ಚಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಮೂವರು ಗಾಯಗೊಂಡಿದ್ದಾರೆ. ಉಪ ಅರಣ್ಯಾಧಿಕಾರಿ ಕೆ.ಕೆ. ನವೀನ್ ಕುಮಾರ್, ಗಸ್ತುಪಾಲಕ ಜಮೀರ್, ಅರಣ್ಯ ವೀಕ್ಷಕ ಸೋಮಶೇಖರ್ ಗಾಯಗೊಂಡಿದ್ದು, ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅತಿಕ್ರಮ ಪ್ರವೇಶ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ತೀವ್ರ ಹಲ್ಲೆ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
೨೦೨೨ ರಲ್ಲಿ ಶ್ರೀನಿವಾಸಪುರ ತಾಲೂಕಿನ ಸಾವಿರಾರು ರೈತರ ಕಾನೂನು ಬದ್ಧ ಭೂಮಿಯನ್ನು ಅರಣ್ಯ ಇಲಾಖೆಯವರು ಹಳೆಯ ನೋಟಿಫಿಕೇಶನ್ಗಳ ಆಧಾರದಲ್ಲಿ ನಮ್ಮದು ಎಂದು ಅರ್ಜಿ ಸಲ್ಲಿಸಿ ಕಂದಾಯ ಪಹಣಿಗಳಲ್ಲಿ ಇಂಡಿಕರಿಸಿ ರಾತ್ರೋರಾತ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಪೊಲೀಸ ಇಲಾಖೆಯ ಬೆಂಬಲದೊAದಿಗೆ ನೂರಾರು ಜನರ ಸಿಬ್ಬಂದಿಯೊAದಿಗೆ ನುಗ್ಗಿ ತಾಲೂಕಿನಾದ್ಯಂತ ಹದಿನೈದು ದಿನಗಳ ಕಾಲ ರೈತರನ್ನ ವಕ್ಕಲಬ್ಬಿಸಿ ಅವರ ಬೆಳೆದ ಬೆಳೆಗಳನ್ನ ನಾಶ ಮಾಡಿ ಭಯಭೀತಿಯನ್ನು ಉಂಟು ಮಾಡಿದ್ದರು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ನೆನ್ನೆಯ ದಿನ ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯ ಮಲ್ಲಮ್ಪಲ್ಲಿ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ರೈತರು ಬೆಳೆ ಮಾಡಿರುವ ಹುರುಳಿ ಮತ್ತು ರಾಗಿ ಬೆಳೆಯನ್ನು ನಾಶ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಪೊಲೀಸರ ಬೆಂಬಲದೊ0ದಿಗೆ ಎರಡು ಟ್ಯಾಕ್ಟರ್ಗಳೊಂದಿಗೆ ಅರಣ್ಯ ಗಿಡಗಳನ್ನು ಹತ್ತಾರು ಜೆಸಿಬಿಗಳು ನಾಲ್ಕು ಪೊಲೀಸ್ ರಿಸರ್ವ್ ವ್ಯಾನ್ ಗಳು ಮತ್ತು ಮತ್ತು ಒಂದು ಲಾರಿ ಎಷ್ಟು ಪೆನ್ಸಿಂಗ್ ಆಗಿ ಸಿಮೆಂಟ್ ಕಂಬಗಳನ್ನು ತೆಗೆದುಕೊಂಡು ಹೋಗಿ ರೈತರ ಬೆಳೆಗಳನ್ನು ನಾಶ ಮಾಡಲು ಮುಂದಾದಾಗ ಉಪ್ಪರಪಲ್ಲಿ ಗ್ರಾಮದ ೧೯ ಕುಟುಂಬಗಳ ದಲಿತ ರೈತರು ಅವರ ಕಾರ್ಯಾಚರಣೆಯನ್ನು ತಡೆದರು.
ಈ ಘಟನೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಶ್ರೀನಿವಾಸಪುರ ತಹಶೀಲ್ದಾರ್ ರೈತರು ಹಾಗೂ ಇತರ ಮುಖಂಡರ ಜೊತೆಯಲ್ಲಿ ಸಭೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್