
ಕೋಲಾರ, ೨೭ ಅಕ್ಟೋಬರ್ (ಹಿ.ಸ) : ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಯುವಕರು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ಗ್ರಾಮಗಳ ಅಭಿವೃದ್ಧಿ ಹಾಗೂ ಜನರ ಒಗ್ಗಟ್ಟಿಗೆ ಶ್ರಮಿಸಿದಾಗ ಮಾತ್ರವೇ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯ ಎಂದು ಸಮಾಜ ಸೇವಕ ಲಕ್ಷ್ಮಣಗೌಡ ಹೇಳಿದರು.
ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ರಾಜಕಲ್ಲಹಳ್ಳಿಯಲ್ಲಿ ೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀ ಕರಗದಮ್ಮದೇವಿ ಮತ್ತು ಶ್ರೀ ನಲ್ಲಗಂಗಮ್ಮ ದೇವಾಲಯವನ್ನು ಆರು ತಿಂಗಳಲ್ಲಿ ಜೀರ್ಣೋದ್ಧಾರಗೊಳಿಸಿ, ರಾಜಗೋಪುರ ಹಾಗೂ ವಿಮಾನ ಗೋಪುರ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲು ಮುಂದಾಗಿದ್ದ ಯುವಕರಿಗೆ ಅವರ ಆಶಯಗಳನ್ನು ಮನವರಿಕೆ ಮಾಡಿಕೊಟ್ಟು, ಗ್ರಾಮಾಭಿವೃದ್ಧಿಗೆ ಆಧ್ಯತೆ ನೀಡುವಂತೆ ಮನವೊಲಿಸಿದ್ದೇ ದೇವಸ್ಥಾನದ ಅಭಿವೃದ್ಧಿಗೆ ಪ್ರೇರಣೆಯಾಯಿತು. ಎಲ್.ಜಿ. ಫೌಂಡೇಶನ್ ವತಿಯಿಂದ ಕಾಮಗಾರಿಗಳ ಜವಾಬ್ದಾರಿ ವಹಿಸಿಕೊಂಡು, ಯಾರಿಂದಲೂ ಹಣ ಸಂಗ್ರಹಿಸದೆ ಮಹೋತ್ಸವದವರೆಗಿನ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು
ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ನಂಜಾವದೂತ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ತೇಜೇಶಲಿಂಗ ಸ್ವಾಮೀಜಿ, ಶಾಸಕ ಕೊತ್ತೂರು ಮಂಜುನಾಥ್, ನಾಗನಾಳ ಸೋಮಣ್ಣ, ರಾಜಕಲ್ಲಹಳ್ಳಿ ಪ್ರವೀಣ್, ಯುವಕರ ಬಳಗದ ಮಹೇಶ್, ಜಗದೀಶ್, ಲಕ್ಷ್ಮಣ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್