ಕರ್ತವ್ಯಲೋಪ ; ಮಾಲೂರು ಭೂ ದಾಖಲೆಗಳ ತಪಾಸಕ ರವಿಕುಮಾರ್ ಅಮಾನತ್ತು
ಕರ್ತವ್ಯಲೋಪ ; ಮಾಲೂರು ಭೂ ದಾಖಲೆಗಳ ತಪಾಸಕ ರವಿಕುಮಾರ್ ಅಮಾನತ್ತು
ಅಮಾನತ್ತು ಆಗಿರುವ ಎಂಪಿ.ರವಿಕುಮಾರ್


ಕೋಲಾರ, ೨೭ ಅಕ್ಟೋಬರ್ (ಹಿ.ಸ) ಆಂಕರ್ : ಮಾಲೂರು ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ತಪಾಸಕರಾಗಿರುವ ಎಂಪಿ.ರವಿಕುಮಾರ್ ರವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತ್ತುಪಡಿಸಲಾಗಿದೆ. ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಮಾನತ್ತು ಆದೇಶ ಹೊರಡಿಸಿದ್ದಾರೆ.

ಮಾಲೂರು ತಾಲ್ಲೂಕು ಕಚೇರಿಯಲ್ಲಿ ಅಮಾನತ್ತುಗೊಳ್ಳಲಾದ ನೌಕರನ ಅಲ್ಮೇರಾ, ಟೇಬಲ್ನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಮಾನತ್ತು ಆಗಿರುವ ಎಂ ಪಿ ರವಿಕುಮಾರ್ ತಪಾಸಕರು ಈ ಹಿಂದೆ ಕೋಲಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ತಪಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅನೇಕ ರೈತರ ಬಳಿ ಪೋಡಿ ಹದ್ದುಬಸ್ತು ಇತರೆ ಕೆಲಸ ಮಾಡಿಸಿ ಕೊಡುವುದಾಗಿ ಹಣವನ್ನು ಪಡೆದು ಮೋಸ ಮಾಡಿರುವುದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ದೂರುಗಳು ಬಂದಿವೆ. ಮಾಲೂರು ತಾಲೂಕಿನಲ್ಲಿಯೂ ಸಹ ಅನೇಕ ರೈತರ ಬಳಿ ಪೋಡಿ ಹದ್ದುಬಸ್ತು ಇತರೆ ಸರ್ವೇ ಕೆಲಸ ಮಾಡಿಸಿ ಕೊಡುವುದಾಗಿ ಸುಳ್ಳು ಹೇಳಿ ಹಣವನ್ನು ವಸೂಲಿ ಮಾಡಿರುವುದಾಗಿ ಆರೋಪಿಸಲಾಗಿದೆ.

ಇತ್ತೀಚಿನ ಪ್ರಜಾಸೇವಾ ಆಂದಲನದಲ್ಲೂ ಸಹಾ ಜಿಲ್ಲಾಧಿಕಾರಿಗಳು ರೈತರಿಗೆ ಮೋಸ ಮಾಡಿ ಹಣ ಪಡೆದಿರುವ ಅಧಿಕಾರಿಗಳ ವಿರುದ್ಧ ಲಿಖಿತ ದೂರು ಸಲ್ಲಿಸಿದರೆ ಅಧಿಕಾರಿಗಳಿಂದ ಹಣವನ್ನು ವಾಪಸ್ ಕೊಡಿಸುವುದಾಗಿ ಭರವಸೆ ನೀಡಿದ್ದು, ಅನೇಕ ರೈತರು ಈ ಸಂಬAಧ ದೂರು ನೀಡಲು ಮುಂದಾಗಿದ್ದಾರೆ.

ರವಿಕುಮಾರ್ ವಿರುದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮಾಲೂರು ತಾಲ್ಲೂಕು ರವರು ವರದಿ ಸಲ್ಲಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ದಿನಾಂಕ:೦೧/೧೦/೨೦೨೬ ರಿಂದ ಈವರೆವಿಗೂ ಅನಧಿಕೃತ ಗೈರು ಹಾಜರಾಗಿರುತ್ತಾರೆ. ಇದರಿಂದ ಸರ್ಕಾರದ ಪ್ರಮುಖ ಯೋಜನೆಗಳಾದ ಪ್ರಜಾಸೇವೆ ಅಡಿಯಲ್ಲಿ ಸ್ವೀಕೃತಿಯಾದ ಅರ್ಜಿಗಳ ವಿಲೇವಾರಿ, ದರಖಾಸ್ತು ಪೋಡಿ ಆಂದೋಲನ, ಮುಜರಾಯಿ ದೇವಸ್ಥಾನಗಳ ಅಳತೆ, ಕೆರೆಗಳ ಅಳತೆ, ಮೋಜಣಿ ಮೂಲಕ ಸ್ವೀಕೃತಿಯಾದ ತತ್ಕಾಲ್ಪೋಡಿ ಅರ್ಜಿಗಳ ವಿಲೇವಾರಿ, ಹದ್ದುಬಸ್ತು ಅರ್ಜಿ ವಿಲೇವಾರಿ, ಇ-ಸ್ವತ್ತು ವಿಲೇವಾರಿ, ಭೂ ಪರಿವರ್ತನೆ, ಸಕಾಲ ಮೂಲಕ ಸ್ವೀಕೃತಿಯಾದ ಅರ್ಜಿಗಳ ವಿಲೇವಾರಿ ಇತರೆ ಅರ್ಜಿಗಳ ವಿಲೇವಾರಿ ಕುಂಠಿತವಾಗಿರುವ ಕಾರಣ, ಸದರಿ ನೌಕರರ ವಿರುದ್ದ ಕರ್ತವ್ಯ ಲೋಪದ ವರದಿ ಸಲ್ಲಿಸಿದ್ದರು.

ರವಿಕುಮಾರ್ ತಮ್ಮ ಲಾಗಿನ್ನಲ್ಲಿ ಅವಧಿ ಮೀರಿದ ೩೨ ಸಕಾಲ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುತ್ತಾರೆ ಮತ್ತು ಈ ಕಾರಣದಿಂದ ಸಾರ್ವಜನಿಕರನ್ನು ಅಲೆದಾಡುವಂತೆ ಮಾಡಿ ತೊಂದರೆ ಉಂಟು ಮಾಡಿರುತ್ತಾರೆ. ನಕಲು ಕೋರಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಾರೆ, ಹಣ ನೀಡದಿದ್ದಲ್ಲಿ ವಿನಾಕಾರಣ ನಕಲು ವಿತರಿಸಲು ವಿಳಂಬ ಮಾಡುತ್ತಾರೆ.

ಸರ್ಕಾರದ ಮಹತ್ವದ ಯೋಜನೆಯಾದ ದರಖಾಸ್ತು ಪೋಡಿ ಅಂದೋಲನದಲ್ಲಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡಿರುತ್ತಾರೆ. ಅಲ್ಲದೆ ದರಖಾಸ್ತು ಪೋಡಿ ಆಂದೋಲನದಲ್ಲಿ ಭೂದಾಖಲೆಗಳ ಉಪನಿರ್ದೇಶಕರು ಕೋಲಾರ ರವರಿಂದ ಮೇಲುಸಹಿಯಾಗಿ ಬಂದAತಹ ಮಾಲೂರು ತಾಲ್ಲೂಕು ಕಸಬಾ ಹೋಬಳಿ ಬೈರ್ನಹೊಸಹಳ್ಳಿ ಗ್ರಾಮದ ಸ.ನಂ.೫, ಹನುಮನಾಯಕನಹಳ್ಳಿ ಗ್ರಾಮದ ಸ.ನಂ.೩೨, ಕರಿನಾಯಹಕನಹಳ್ಳಿ ಗ್ರಾಮದ ಸ.ನಂ.೦೧, ಹುರಳಗೆರೆ ಗ್ರಾಮದ ಸ.ನಂ೧೧೯, ಮಾಸ್ತಿ ಹೋಬಳಿ ದೊಡ್ಡಕಲ್ಲಹಳ್ಳಿ ಗ್ರಾಮದ ಸ.ನಂ.೮೭ ಇತರೆ ಅನೇಕ ಕಡತಗಳನ್ನು ಅಭಿಲೇಖಾಲಯಕ್ಕೆ ಸಲ್ಲಿಸದೆ, ಸದರಿ ಕಡತಗಳನ್ನು ಅನಧಿಕೃತವಾಗಿ ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡು ಕರ್ತವ್ಯ ಲೋಪವೆಸಗಿರುತ್ತಾರೆ ಎಂದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಜೊತೆಗೆ ಟಿಪ್ಪಣಿ ಆಕಾರಬಂದ್ ಇತರೆ ದಾಖಲೆಗಳ ನಕಲು ವಿತರಿಸದೇ ಅಭಿಲೇಖಾಲಯದಲ್ಲಿ ಇರಬೇಕಾದ ಸದರಿ ದಾಖಲೆಗಳನ್ನು ನಿಯಮಬಾಹಿರವಾಗಿ ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡು ಗಂಭೀರವಾದ ಕರ್ತವ್ಯಲೋಪ ಎಸಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಅಭಿಲೇಖಾಲಯದಲ್ಲಿ ಇರಬೇಕಾದ ದಾಖಲೆಗಳನ್ನು ಸದರಿ ನೌಕರರ ಸುಪರ್ದಿಯಲ್ಲಿ ಇರಿಸಿಕೊಂಡಿರುವುದರಿAದ ಕ್ರಿಮಿನಲ್ ಮೊಕದ್ದಮೆ ಹೂಡಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಶಿಫಾರಸ್ಸು ಮಾಡಿರುತ್ತಾರೆ.

ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ, ಮಾಲೂರು ತಾಲ್ಲೂಕು, ಇವರನ್ನು ಅಮಾನತ್ತುಗೊಳಿಸಿ ಹಾಲಿ ಹುದ್ದೆಯ ಮೇಲಿನ ಹಕ್ಕನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande