ಕೋಲಾರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ
ಕೋಲಾರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ
ವಿಶೇಷ ಸಮಗ್ರ ಮತದಾರರ ಪರಿಷ್ಕರಣೆಯ ಬಗ್ಗೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಬಾಗೇವಾಡಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ವಿವರಗಳನ್ನು ತಿಳಿಸಿದರು.


ಕೋಲಾರ, ೨೭, ಅಕ್ಟೋಬರ್ (ಹಿ.ಸ.) : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅನುಗುಣವಾಗಿ ಕರ್ನಾಟಕದಲ್ಲಿ ೩ನೇ ಹಂತದಲ್ಲಿ ನಡೆಸಲಾದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಕೋಲಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧೧,೩೯,೩೯೩ ಮತದಾರರಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಂತಿಮ ಮತದಾರರ ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಹಾಗೂ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ವೇಳಾಪಟ್ಟಿಯ ಕುರಿತು ಮಾಹಿತಿ ನೀಡಿದ ಅವರು, ಭಾರತ ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ದಿನಾಂಕ ೩೦.೦೬.೨೦೨೬ ರಿಂದ ೧೭.೦೮.೨೦೨೬ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಕಾರ್ಯ ನಡೆಸಲಾಗಿದೆ. ದಿನಾಂಕ ೧೭.೦೮.೨೦೨೬ ರಂದು ಮತಗಟ್ಟೆಗಳ ರ್ಯಾಷನಲೈಸೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ತದನಂತರ ದಿನಾಂಕ ೨೪.೦೮.೨೦೨೬ ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ, ೨೪.೦೮.೨೦೨೬ ರಿಂದ ೨೩.೦೯.೨೦೨೬ ರವರೆಗೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ ೨೪.೦೮.೨೦೨೬ ರಿಂದ ೨೨.೧೦.೨೦೨೬ ರವರೆಗೆ ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆಯನ್ನು ನಡೆಸಿ, ಇಂದು ದಿನಾಂಕ ೨೭.೧೦.೨೦೨೬ ರಂದು ನಮೂನೆ-೧೬ರಲ್ಲಿ (ಆರ್ಇಆರ್, ೧೯೬೦ರ ನಿಯಮ ೧೦) ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಿAದ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಮತದಾರರ ಅಂಕಿ-ಅAಶಗಳನ್ನು ವಿವರಿಸುತ್ತಾ, ಮಂಗಳವಾರ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೧,೫೭೮ ಮತಗಟ್ಟೆಗಳಿದ್ದು, ೫,೬೫,೫೨೬ ಪುರುಷರು, ೫,೭೩,೭೭೯ ಮಹಿಳೆಯರು ಹಾಗೂ ೮೮ ಇತರರು ಸೇರಿದಂತೆ ಒಟ್ಟು ೧೧,೩೯,೩೯೩ ಮತದಾರರಿದ್ದಾರೆ. ವಿಶೇಷವೆಂದರೆ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಸರಾಸರಿ ಲಿಂಗ ಅನುಪಾತ ೧೦೧೫ ಆಗಿದೆ. ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿಯಂತೆ ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಟ್ಟು ೨೮೮ ಮತಗಟ್ಟೆಗಳಿದ್ದು, ೯೯,೪೯೨ ಪುರುಷರು, ೯೯,೬೨೮ ಮಹಿಳೆಯರು ಹಾಗೂ ೪ ಇತರರು ಸೇರಿದಂತೆ ಒಟ್ಟು ೧,೯೯,೧೨೪ ಮತದಾರರಿದ್ದಾರೆ (ಲಿಂಗ ಅನುಪಾತ ೧೦೦೧). ಮುಳಬಾಗಿಲು ಕ್ಷೇತ್ರದಲ್ಲಿ ೨೭೪ ಮತಗಟ್ಟೆಗಳಿದ್ದು, ೯೮,೪೨೬ ಪುರುಷರು, ೧,೦೦,೫೮೨ ಮಹಿಳೆಯರು ಹಾಗೂ ೭ ಇತರರು ಸೇರಿದಂತೆ ಒಟ್ಟು ೧,೯೯,೦೧೫ ಮತದಾರರಿದ್ದಾರೆ ಎಂದು ತಿಳಿಸಿದರು.

ಕೆ.ಜಿ.ಎಫ್ ಕ್ಷೇತ್ರದಲ್ಲಿ ೨೨೪ ಮತಗಟ್ಟೆಗಳಿದ್ದು, ೮೦,೯೪೮ ಪುರುಷರು, ೮೩,೬೫೨ ಮಹಿಳೆಯರು ಹಾಗೂ ೨೫ ಇತರರು ಸೇರಿದಂತೆ ಒಟ್ಟು ೧,೬೪,೬೨೫ ಮತದಾರರಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ ೨೫೯ ಮತಗಟ್ಟೆಗಳಿದ್ದು, ೯೧,೫೦೮ ಪುರುಷರು, ೯೨,೧೭೬ ಮಹಿಳೆಯರು ಹಾಗೂ ೨೨ ಇತರರು ಸೇರಿದಂತೆ ಒಟ್ಟು ೧,೮೩,೭೦೬ ಮತದಾರರಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ೨೮೪ ಮತಗಟ್ಟೆಗಳಿದ್ದು, ೧,೦೫,೪೭೭ ಪುರುಷರು, ೧,೦೬,೯೫೬ ಮಹಿಳೆಯರು ಹಾಗೂ ೨೪ ಇತರರು ಸೇರಿದಂತೆ ಒಟ್ಟು ೨,೧೨,೪೫೭ ಮತದಾರರಿದ್ದಾರೆ. ಅದೇ ರೀತಿ, ೧೪೯-ಮಾಲೂರು ಕ್ಷೇತ್ರದಲ್ಲಿ ೨೪೯ ಮತಗಟ್ಟೆಗಳಿದ್ದು, ೮೯,೬೭೫ ಪುರುಷರು, ೯೦,೭೮೫ ಮಹಿಳೆಯರು ಹಾಗೂ ೬ ಇತರರು ಸೇರಿದಂತೆ ಒಟ್ಟು ೧,೮೦,೪೬೬ ಮತದಾರರಿದ್ದಾರೆ ಎಂದು ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.

ವಿಶೇಷ ವರ್ಗಗಳ ಮತದಾರರ ಮಾಹಿತಿ ನೀಡಿದ ಅವರು, ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ಒಟ್ಟು ೧೧,೦೬೪ ಹಿರಿಯ ನಾಗರಿಕ ಮತದಾರರಿದ್ದು, ಇದರಲ್ಲಿ ೪,೯೧೭ ಪುರುಷರು ಮತ್ತು ೬,೧೪೭ ಮಹಿಳೆಯರಿದ್ದಾರೆ. ಕ್ಷೇತ್ರವಾರು ಹಿರಿಯ ನಾಗರಿಕರು ಶ್ರೀನಿವಾಸಪುರದಲ್ಲಿ ೨,೧೯೩ (ಪುರುಷರು ೯೫೧, ಮಹಿಳೆಯರು ೧,೨೪೨), ಮುಳಬಾಗಿಲಿನಲ್ಲಿ ೧,೮೯೬ (ಪುರುಷರು ೮೬೩, ಮಹಿಳೆಯರು ೧,೦೩೩), ಕೆ.ಜಿ.ಎಫ್ನಲ್ಲಿ ೧,೧೬೭ (ಪುರುಷರು ೪೮೯, ಮಹಿಳೆಯರು ೬೭೮), ಬಂಗಾರಪೇಟೆಯಲ್ಲಿ ೧,೬೦೬ (ಪುರುಷರು ೭೪೧, ಮಹಿಳೆಯರು ೮೬೫), ಕೋಲಾರದಲ್ಲಿ ೨,೪೦೮ (ಪುರುಷರು ೧,೧೦೧, ಮಹಿಳೆಯರು ೧,೩೦೭) ಹಾಗೂ ಮಾಲೂರಿನಲ್ಲಿ ೧,೭೯೪ (ಪುರುಷರು ೭೭೨, ಮಹಿಳೆಯರು ೧,೦೨೨) ಮತದಾರರಿದ್ದಾರೆ. ಇನ್ನು ಜಿಲ್ಲೆಯಲ್ಲಿ ಒಟ್ಟು ೨೨,೭೮೬ ಯುವ ಮತದಾರರಿದ್ದು, ಇದರಲ್ಲಿ ೧೧,೯೩೦ ಪುರುಷರು ಹಾಗೂ ೧೦,೮೫೬ ಮಹಿಳೆಯರಿದ್ದಾರೆ. ಕ್ಷೇತ್ರವಾರು ಯುವ ಮತದಾರರ ಪೈಕಿ ಶ್ರೀನಿವಾಸಪುರದಲ್ಲಿ ೩,೫೧೭ (ಪುರುಷರು ೧,೮೬೫, ಮಹಿಳೆಯರು ೧,೬೫೨), ಮುಳಬಾಗಿಲಿನಲ್ಲಿ ೪,೨೪೭ (ಪುರುಷರು ೨,೨೧೬, ಮಹಿಳೆಯರು ೨,೦೩೧), ಕೆ.ಜಿ.ಎಫ್ನಲ್ಲಿ ೨,೯೯೯ (ಪುರುಷರು ೧,೫೧೬, ಮಹಿಳೆಯರು ೧,೪೮೩), ಬಂಗಾರಪೇಟೆಯಲ್ಲಿ ೩,೮೪೩ (ಪುರುಷರು ೨,೦೭೭, ಮಹಿಳೆಯರು ೧,೭೬೬), ಕೋಲಾರದಲ್ಲಿ ೪,೨೮೯ (ಪುರುಷರು ೨,೨೬೬, ಮಹಿಳೆಯರು ೨,೦೨೩) ಮತ್ತು ಮಾಲೂರಿನಲ್ಲಿ ೩,೮೯೧ (ಪುರುಷರು ೧,೯೯೦, ಮಹಿಳೆಯರು ೧,೯೦೧) ಮಂದಿ ಇದ್ದಾರೆ ಎಂದು ತಿಳಿಸಿದರು.

ನೋಟಿಸ್ ಜಾರಿ ಹಾಗೂ ವಿಚಾರಣೆ ಪ್ರಕ್ರಿಯೆ ಕುರಿತು ಮಾತನಾಡಿದ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು, ಎಸ್ಐಆರ್ ಗಣತಿ ನಮೂನೆಯಲ್ಲಿ ಒದಗಿಸಲಾದ ಹಿಂದಿನ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದ (ಮ್ಯಾಪಿಂಗ್ ಇಲ್ಲದ) ಅಥವಾ ದತ್ತಸಂಚಯದೊAದಿಗೆ ಹೊಂದಿಕೆಯಾಗದ ಮತದಾರರಿಗೆ ಬಿಎಲ್ಒಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು ೧,೪೨,೧೮೨ ನೋಟಿಸ್ಗಳನ್ನು ಸೃಜಿಸಿ, ಎಲ್ಲವನ್ನೂ ಜಾರಿ ಮಾಡಿ ವಿಚಾರಣೆ ನಡೆಸಲಾಗಿದ್ದು, ಈ ಪೈಕಿ ವಿಚಾರಣೆಯ ನಂತರ ೧,೩೮,೭೯೦ ಮತದಾರರನ್ನು ಅಂತಿಮ ಪಟ್ಟಿಗೆ ಪರಿಗಣಿಸಲಾಗಿದೆ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಚುನಾವಣೆ ತಹಸೀಲ್ದಾರ್ ಮುನಿಷಾಮಿರೆಡ್ಡಿ ಶಿರಸ್ತೇದಾರ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande