ಬಳ್ಳಾರಿ ಜಿಲ್ಲಾ ಪೊಲೀಸರಿಂದ 872 ಪ್ರಕರಣ- 3,54,000 ದಂಡ ಸಂಗ್ರಹ
ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಮತ್ತು ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿದ ಜಿಲ್ಲೆಯ ಪೊಲೀಸರು ಒಟ್ಟು 872 ಪ್ರಕರಣಗಳನ್ನು ದಾಖಲಿಸಿ , 3,54,000 ದಂಡವನ್ನು ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಬಳ್ಳಾರಿ ಜಿಲ್ಲಾ ಪೊಲೀಸರಿಂದ  872 ಪ್ರಕರಣ- 3,54,000 ದಂಡ ಸಂಗ್ರಹ


ಬಳ್ಳಾರಿ, 13 ಅಕ್ಟೋಬರ್ (ಹಿ.ಸ.)

ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಮತ್ತು ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿದ ಜಿಲ್ಲೆಯ ಪೊಲೀಸರು ಒಟ್ಟು 872 ಪ್ರಕರಣಗಳನ್ನು ದಾಖಲಿಸಿ , 3,54,000 ದಂಡವನ್ನು ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸುಮನ್ ಡಿ ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಡಿ.ಎಲ್. ವಿಮಾ, ನೋಂದಣಿ, ಹೆಲ್ಮೆಟ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ 679 ಪ್ರಕರಣ ದಾಖಲಿಸಿ ರೂ 274900 ದಂಡ ಸಂಗ್ರಹಿಸಲಾಗಿದೆ.

ಅದೇ ಪ್ರಕಾರವಾಗಿ ಕೊಪಟ ಕೇಸ್ ನಿಂದ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರ ವಿರುದ್ಧ 154 ಪ್ರಕರಣಗಳನ್ನು ದಾಖಲಿಸಿ 5300 ರೂಪಾಯಿ, ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸಲಾಗಿದೆ ಉಳಿದ ಪ್ರಕರಣಗಳಿಗೆ ದಂಡ ಪಾವತಿಸಲು ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಜೂಜಾಟ ನಡೆಯುತ್ತಿದ್ದ 03 ಸ್ಥಳದ ಮೇಲೆ ದಾಳಿ ಮಾಡಿ ರೂ 51270/- ಹಣ ವನ್ನು ಜಪ್ತುಸಿಕೊಳ್ಳಲಾಗಿದೆ ಮತ್ತು ಅಕ್ರಮ ಮಧ್ಯ ಮಾರಾಟದ ಕೇಂದ್ರಗಳ ಮೇಲೆ ದಾಳಿ ಮಾಡಿ ಅಬಕಾರಿ ನಿಯಮದಂತೆ 11ಪ್ರಕರಣಗಳನ್ನು ದಾಖಲಿಸಿ ರೂ 20055 ಹಣ ಮತ್ತು ರೂ 20,055 ಮೊತ್ತದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ಸುಮನ್ ಡಿ.ಪೆನ್ನೇಕರ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande