ಮನೆಗಳ್ಳರಿಬ್ಬರ ಬಂಧನ ; ಬಂಧಿತರಿಂದ ಚಿನ್ನ ಜಪ್ತಿ
ವಿಜಯಪುರ, 05 ಜನವರಿ (ಹಿ.ಸ.) : ಆ್ಯಂಕರ್ : ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಅಬ್ದುಲ ಮೈನೂದ್ದಿನ ಚೀನಿ, ಹೀರಾ ಮಕ್ತಮಸಾಬ ಹುಣಸಿಮರದ ಬಂಧಿತ ಆರೋಪಿಗಳು. ವಿಜಯಪುರ ಜಿಲ್ಲೆಯ ಮಸೂತ
ಕಳ್ಳ


ವಿಜಯಪುರ, 05 ಜನವರಿ (ಹಿ.ಸ.) :

ಆ್ಯಂಕರ್ : ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

ಅಬ್ದುಲ ಮೈನೂದ್ದಿನ ಚೀನಿ, ಹೀರಾ ಮಕ್ತಮಸಾಬ ಹುಣಸಿಮರದ ಬಂಧಿತ ಆರೋಪಿಗಳು.

ವಿಜಯಪುರ ಜಿಲ್ಲೆಯ ಮಸೂತಿ ಗ್ರಾಮದ ದಾನಮ್ಮ ಪರಯ್ಯ ಗಣಾಚಾರಿ ಇವರ ಮನೆಯ ಬಾಗೀಲದ ಕೀಲಿಯನ್ನು ಮುರಿದು ಮನೆಯಲ್ಲಿದ್ದ 40 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.

ಸೂಕ್ತ ತನಿಖೆ ನಡೆಸಿ ಆರೋಪಿತರಿಂದ ಕೃತ್ಯಕ್ಕೆ ಬಳಸಿದ 02 ಮೋಟಾರ್ ಸೈಕಲ್ ವಾಹನಗಳನ್ನು ಹಾಗೂ ಕಳ್ಳತನ ಮಾಡಿದ್ದ 4,50,000/- ಮೌಲ್ಯದ 40 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದರಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದ ತನಿಖಾ ತಂಡದಲ್ಲಿನ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande