
ವಿಜಯಪುರ, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಗಂಡನೋರ್ವ ಪತ್ನಿಯ ಬರ್ಬರ ಹತ್ಯೆಗೈದು 24 ದಿನದ ನಂತರ ಹತ್ಯೆಯ ಘಟನೆ ಬಯಲಿಗೆ ಬಂದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ನಡೆದಿದೆ.
ಸರೋಜಿನಿ ರತ್ನಾಕರ ( 45 ) ಹತ್ಯೆಯಾದ ಪತ್ನಿ. ಪ್ರಭು ರತ್ನಾಕರ್ (46) ಹತ್ಯೆ ಮಾಡಿದ ಆರೋಪಿ. ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ರತ್ನಾಕರ್ ಸಾಲಮಾಡಿದ್ದನು. ಸಾಲದ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜನೇವರಿ 23 ರಂದು ರಾತ್ರಿ ಇಬ್ಬರ ಮಧ್ಯೆ ಜಗಳ ಆಗಿದೆ. ಜನೇವರಿ 24 ರಂದು ಪತ್ನಿ ಸರೋಜಿನಿ ತಲೆಗೆ ಹಾರಿಯಿಂದ ಪತಿ ಹೊಡೆದಿದ್ದಾನೆ. ನಂತರ ಮನೆಯಲ್ಲೇ ಶವವನ್ನು ಪತಿ ಫ್ರಬು ಹೂತುಹಾಕಿದ್ದಾನೆ. ಸದ್ಯ ಶವ ಹೊರತಗೆದು ದೇವರಹಿಪ್ಪರಗಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಸರೋಜಿನಿ ತಾಯಿ ಕಮಲವ್ವ ಅಳಿಯ ಪ್ರಭು ಮೇಲೆ ದೂರು ದಾಖಲು ಮಾಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande