ಚಿನ್ನದಂಗಡಿಯ ದರೋಡೆಕೋರರಿಬ್ಬರ ಬಂಧನ
ವಿಜಯಪುರ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಾಡುಹಗಲೇ ಚಿನ್ನದ ಅಂಗಡಿ ದರೋಡೆಗೈದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.‌ ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಜನವರಿ 26ರಂದು ಮಧ್ಯಾಹ್ನ 3:30 ಗಂಟೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲ
ಚಿನ್ನ


ವಿಜಯಪುರ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಾಡುಹಗಲೇ ಚಿನ್ನದ ಅಂಗಡಿ ದರೋಡೆಗೈದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.‌

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಜನವರಿ 26ರಂದು ಮಧ್ಯಾಹ್ನ 3:30 ಗಂಟೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿರುವ ಮಹಾರುದ್ರ ಕಂಚಗಾರರ ಭೂಮಿಕಾ ಜ್ಯುವೆಲ್ಲರಿ ಅಂಗಡಿಯಲ್ಲಿ ಹಾಡುಹಗಲೇ ಇಬ್ಬರು ಗನ್ ತೋರಿಸಿ 205 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿಯ ಆಭರಣಗಳು ದರೋಡೆಗೈದು ಎಸ್ಕೇಪ್ ಆಗಿದ್ದರು. ಇನ್ನು ಬಂಧಿತ ಆರೋಪಿಗಳು ಮಹಾರಾಷ್ಟ್ರ ಮೂಲದ ಹಣಮಂತ ವಾಘೋಲಿ(28), ಶಿವರಾಜ್ ನಾವಿ(28) ಬಂಧನ ಮಾಡಲಾಗಿದೆ ಎಂದರು.

ಅಲ್ಲದೇ, ಕೃತ್ಯಕ್ಕೆ ಬಳಸಿದ ಒಂದು ಕಂಟ್ರಿ ಪಿಸ್ತೂಲ್ ಸೇರಿದಂತೆ ಮೂರು ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡುಗಳು, ಒಂದು ಏರಗನ್, ಬೈಕ್, ಹ್ಯಾಂಡ್‌ಗ್ಲೌಸ್, ಜಾಕೇಟ್, ಹೆಲ್ಮೆಟ್ ಹಾಗೂ 205 ಗ್ರಾಂ ಚಿನ್ನ, ಒಂದು ಕೆಜಿಯ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande