ಜನವರಿ ೩೧ರಂದು ಕೋಲಾರದಲ್ಲಿ ಹಿಂದು ಸಮಾಜೋತ್ಸವ
ಜನವರಿ ೩೧ರಂದು ಕೋಲಾರದಲ್ಲಿ ಹಿಂದು ಸಮಾಜೋತ್ಸವ
ಚಿತ್ರ - ಕೋಲಾರದ ಗಾಂಧಿನಗರದ ಆಂಜನೇಯಸ್ವಾಮಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್‌ಗೌಡ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಬಗ್ಗೆ ಆಹ್ವಾನ ಪತ್ರಿಕೆಗಳನ್ನು ನೀಡಿದರು.


ಕೋಲಾರ, ಜನವರಿ ೨೧, (ಹಿ.ಸ) :

ಆ್ಯಂಕರ್ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜನವರಿ ೩೧ ರಂದು ಶನಿವಾರ ಹಿಂದು ಸಮಾಜೋತ್ಸವ ಕಾರ್ಯಕ್ರಮ ಹಾಗೂ ಶೋಭಾಯಾತ್ರೆಯ ನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎನ್.ಎಸ್ ಪ್ರವೀಣ್‌ಗೌಡ ಹೇಳಿದರು.

ಕೋಲಾರದ ಗಾಂಧಿನಗರದ ಆಂಜನೇಯ ಸ್ವಾಮಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ, ೩೧ ರಂದು ಮಧ್ಯಾಹ್ನ ೩ಕ್ಕೆ ಪ್ರಾರಂಭವಾಗುವ ಶೋಭಾಯಾತ್ರೆಯು ನಗರದ ಮೆಕ್ಕೆ ಸರ್ಕಲ್ ವೃತ್ತದ ಮೂಲಕ ಅಮ್ಮವಾರಿ ಪೇಟೆ ಸೇರಿದಂತೆ ಕೋಟೆ ಬಡಾವಣೆ ರಸ್ತೆಯ ಮೂಲಕ ಜೂನಿಯರ್ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ, ಸಂಜೆ ೫ಕ್ಕೆ ಹಿಂದೂ ಸಮಾಜೋತ್ಸವ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರಲ್ಲದೆ ಜನವರಿ ೨೯ರಂದು ಬೈಕ್ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದೂ ಸಮಾಜೋತ್ಸವ ಕಾರ್ಯಕ್ರಮವೂ ಇತರೆ ಧರ್ಮಗಳ ವಿರುದ್ಧ ಮಾಡುವ ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ, ಈ ಒಂದು ಕಾರ್ಯಕ್ರಮ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದ್ದು, ಸ್ವಯಂ ಪ್ರೇರಿತರಾಗಿ ಮನೆಗೆ ಒಬ್ಬರಂತೆ ಹಿಂದೂ ಸಮಾಜೋತ್ಸವ ಹಾಗೂ ಬೈಕ್ ರ‍್ಯಾಲಿಯನ್ನು ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಗಾಂಧಿ ನಗರದ ಮನೆ ಮನೆಗೆ ಹಾಗೂ ವಾಹನಗಳಿಗೆ ಹಿಂದೂ ಸಮಾಜೋತ್ಸವದ ಸ್ಟಿಕರ್‌ಗಳನ್ನು ಅಂಟಿಸುವ ಕಾರ್ಯದಲ್ಲಿ ಕಾರ್ಯಕ್ರಮದ ಆಯೋಜಕರು ಬಿಜಿಯಾಗಿದ್ದರು.

ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ನಗರ ಸಂಚಾಲಕ ದಂತ ವೈದ್ಯ ಡಾ. ಜನಾರ್ಧನ್, ಆರ್.ಎಸ್.ಎಸ್ ಪ್ರಚಾರಕ ಗಂಗಾಧರ್, ಕೆ.ಯು.ಡಿ.ಎ ನಿವೃತಾಧಿಕಾರಿ ಗೋಪಾಲ್, ಶ್ರೀನಿವಾಸ್, ದಲಿತ್ ನಾರಾಯಣಸ್ವಾಮಿ ಚೇತನ್ ಬಾಬು, ಮಹೇಶ್, ಗಂಗೂಲಿ, ನಾಗರಾಜ್, ಮದನ್, ಆನಂದ್, ಶರತ್ ಸೇರಿದಂತೆ ಗಾಂಧಿನಗರ ಬಡಾವಣೆ ಮುಖಂಡರು ಯುವ ಮುಖಂಡರು ಇದ್ದರು.

ಚಿತ್ರ - ಕೋಲಾರದ ಗಾಂಧಿನಗರದ ಆಂಜನೇಯಸ್ವಾಮಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್‌ಗೌಡ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಬಗ್ಗೆ ಆಹ್ವಾನ ಪತ್ರಿಕೆಗಳನ್ನು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande