ಕೆಂಪಮ್ಮ ಮತ್ತು ಎನ್.ಮೋಹನ್ ಕುಮಾರ್ಗೆ ಜಾನಪದ ದತ್ತಿಪ್ರಶಸ್ತಿ
ಕೆಂಪಮ್ಮ ಮತ್ತು ಎನ್.ಮೋಹನ್ ಕುಮಾರ್ಗೆ ಜಾನಪದ ದತ್ತಿಪ್ರಶಸ್ತಿ
ಕೆಂಪಮ್ಮ ಮತ್ತು ಎನ್.ಮೋಹನ್ ಕುಮಾರ್ಗೆ ಜಾನಪದ ದತ್ತಿಪ್ರಶಸ್ತಿ


ಕೋಲಾರ, ಜನವರಿ೨೧ (ಹಿ.ಸ.) :

ಆ್ಯಂಕರ್ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪ್ರತಿ ವರ್ಷ ಹಿರಿಯ ಜಾನಪದ ವಿದ್ವಾಂಸ ಕೆ.ಆರ್.ಲಿಂಗಪ್ಪ ಹೆಸರಿನಲ್ಲಿ ನೀಡುವ ಜಾನಪದ ದತ್ತಿಪ್ರಶಸ್ತಿಯನ್ನು ಈ ಬಾರಿ ಮಂಡ್ಯ ತಾಲೂಕಿನ ಕೆಂಪಮ್ಮ ಮತ್ತು ತುಮಕೂರು ಜಿಲ್ಲೆ ತಂಬುನಕಟ್ಟೆಯ ಎನ್.ಮೋಹನ್ ಕುಮಾರ್ಗೆ ನೀಡಲಾಗುತ್ತಿದೆ.

ಜನವರಿ ೨೨, ೨೦೨೬ ಗುರುವಾರ ಬೆಳಗ್ಗೆ ೧೧-೦೦ ಗಂಟೆಗೆ ಅಂತರಗಂಗ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯುಕ್ರಮ ನಡೆಯಲಿದೆ.

ಹಿರಿಯ ಸಾಹಿತಿ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಗೋ.ರು ಚನ್ನಬಸಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿವೃತ್ತ ಹಿರಿಯ ಐ.ಎ. ಎಸ್ ಅಧಿಕಾರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಕಾಶ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಸಹಯೋಗದಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶರಣಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸುರೇಶ್ ಮನವಿ ಮಾಡಿದ್ದಾರೆ.

ಚಿತ್ರ : ಮಂಡ್ಯ ತಾಲೂಕಿನ ಕೆಂಪಮ್ಮ ಮತ್ತು ತುಮಕೂರು ಜಿಲ್ಲೆ ತಂಬುನಕಟ್ಟೆಯ ಎನ್.ಮೋಹನ್ ಕುಮಾರ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande