ಭಾರತ–ಪೋಲೆಂಡ್ ಬಹುಪಕ್ಷೀಯ ಸಹಕಾರ ವೃದ್ಧಿ ಚರ್ಚೆ
ನವದೆಹಲಿ, 19 ಜನವರಿ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಪೋಲೆಂಡ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆರ್ಥಿಕತೆ, ತಂತ್ರಜ್ಞಾನ, ರಕ್ಷಣೆ, ಗಣಿಗಾರಿಕೆ ಹಾಗೂ ಬಹುಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಇಂದು ಮಹತ್ವದ ಚರ್ಚೆಗಳು ನಡೆದವು. ದೆಹಲಿಯ ಹೈದರಾಬಾದ್
FM-Talk-Poland-India


ನವದೆಹಲಿ, 19 ಜನವರಿ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಪೋಲೆಂಡ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆರ್ಥಿಕತೆ, ತಂತ್ರಜ್ಞಾನ, ರಕ್ಷಣೆ, ಗಣಿಗಾರಿಕೆ ಹಾಗೂ ಬಹುಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಇಂದು ಮಹತ್ವದ ಚರ್ಚೆಗಳು ನಡೆದವು.

ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಪೋಲೇಂಡ್ ಉಪ ಪ್ರಧಾನ ಮಂತ್ರಿ ಹಾಗೂ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿಕೋರ್ಸ್ಕಿ ಅವರು ಭೇಟಿ ನಡೆಸಿದರು.

ದ್ವಿಪಕ್ಷೀಯ ಸಂಬಂಧಗಳು ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭೇಟಿ ವೇಳೆ ಇಬ್ಬರೂ ನಾಯಕರು ಆರ್ಥಿಕ ಸಹಕಾರ, ತಂತ್ರಜ್ಞಾನ ವಿನಿಮಯ, ರಕ್ಷಣೆ, ಗಣಿಗಾರಿಕೆ, ಜನರಿಂದ–ಜನರಿಗೆ ಸಂಪರ್ಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು. ಭಾರತ–ಯುರೋಪಿಯನ್ ಒಕ್ಕೂಟ ಸಂಬಂಧಗಳನ್ನು ಬಲಪಡಿಸುವಲ್ಲಿ ಪೋಲೆಂಡ್ ನೀಡುತ್ತಿರುವ ಬೆಂಬಲವನ್ನು ಜೈಶಂಕರ್ ಅವರು ಶ್ಲಾಘಿಸಿದರು.

ಸಭೆಯಲ್ಲಿ 2024–28ರ ಕ್ರಿಯಾ ಯೋಜನೆಯನ್ನು ಪರಿಶೀಲಿಸಲಾಯಿತು. ಈ ಯೋಜನೆಯಡಿ ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶುದ್ಧ ತಂತ್ರಜ್ಞಾನ, ಡಿಜಿಟಲ್ ನಾವೀನ್ಯತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.

ಇದಕ್ಕೂ ಮುನ್ನ ನಡೆದ ಸಭೆಯ ಆರಂಭಿಕ ಭಾಷಣದಲ್ಲಿ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಭಾರತ–ಪೋಲೆಂಡ್ ನಡುವಿನ ಸಾಂಪ್ರದಾಯಿಕವಾಗಿ ಸೌಹಾರ್ದಯುತ ಸಂಬಂಧಗಳನ್ನು ಉಲ್ಲೇಖಿಸಿದರು. ಆಗಸ್ಟ್ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಲೆಂಡ್ ಭೇಟಿಯ ಸಂದರ್ಭದಲ್ಲಿ ಈ ಸಂಬಂಧವನ್ನು ಅಧಿಕೃತವಾಗಿ ಕಾರ್ಯತಂತ್ರದ ಪಾಲುದಾರಿಕೆಯಾಗಿ ಏರಿಸಲಾಗಿತ್ತು ಎಂದು ಅವರು ತಿಳಿಸಿದರು.

ಮಧ್ಯ ಯುರೋಪ್ ಪ್ರದೇಶದಲ್ಲಿ ಪೋಲೆಂಡ್ ಭಾರತಕ್ಕೆ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದೆ. ಪ್ರಸ್ತುತ ಭಾರತ–ಪೋಲೆಂಡ್ ದ್ವಿಪಕ್ಷೀಯ ವ್ಯಾಪಾರವು ಸುಮಾರು 7 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ತಲುಪಿದ್ದು, ಪೋಲೆಂಡ್‌ನಲ್ಲಿ ಭಾರತೀಯ ಹೂಡಿಕೆಗಳು 3 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಮೀರಿವೆ ಎಂದು ಜೈಶಂಕರ್ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande