ಕಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಕೆರೆ
ಕಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಕೆರೆ
ಚಿತ್ರ - ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ನಟೇಶ್


ಕೋಲಾರ, 0೬ ಸೆಪ್ಟೆಂಬರ್ (ಹಿ.ಸ) :

ಆ್ಯಂಕರ್ : ಕಾಯಂ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕ ಮೂಲಭೂತ ಸಮಸ್ಯೆಗಳನ್ನು ರಾಜಿ ಸಂದಾನದ ಮೂಲಕ ತ್ವರಿತ ವಿಲೇವಾರಿ ಮಾಡಲಾಗುವುದು ಹಾಗೂ ಪ್ರಕರಣಗಳ ಕುರಿತು ಸಾರ್ವಜನಿಕರು ಜನತಾ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶೀಗಳಾದ ಆರ್. ನಟೇಶ್ ಹೇಳಿದರು.

ಕೋಲಾರ ಜಿಲ್ಲಾ ನ್ಯಾಯಲಯದ ಆವರಣದಲ್ಲಿರುವ ಕಾಯಂ ಜನತಾ ನ್ಯಾಯಲಯದ ಕುರಿತು ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕೋಲಾರದ ನ್ಯಾಯಲಯದಲ್ಲಿ ಅತಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು. ೧ ಕೋಟಿ ರೂಪಾಯಿಗಳವರೆಗಿನ ಪ್ರಕರಣಗಳನ್ನು ಈ ಜನತಾ ನ್ಯಾಯಾಲಯದಲ್ಲಿ ಯಾವುದೇ ಶುಲ್ಕವಿಲ್ಲದೆ ಪ್ರಕರಣದ ಅರ್ಜಿಯನ್ನು ಸಲ್ಲಿಸಬಹುದು ಎಂದರು.

ಈ ನ್ಯಾಯಲಯವು ೨೦೦೭ ರಿಂದ ಪ್ರಾರಂಭವಾಗಿದ್ದು, ಇಲ್ಲಿಯವರೆಗು ಪ್ರತಿ ತಿಂಗಳು ೨೪೦ ರಿಂದ ೨೫೦ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಸಾರ್ವಜನಿಕರು ಯಾವುದೆ ಭಯವಿಲ್ಲದೆ ಅರ್ಜಿಯನ್ನು ಸಲ್ಲಿಸಿ ತ್ವರಿತವಾಗಿ ಪರಿಹಾರ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಯಂ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕ ಉಪಯುಕ್ತ ಸೇವೆಗಳಾದ ರಸ್ತೆಸಾರಿಗೆ, ಜಲಸಾರಿಗೆ, ವಾಯುಸಾರಿಗೆ, ಟೆಲಿಗ್ರಾಂ, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆ, ಇನ್ಸುರೆನ್ಸ್, ಶಿಕ್ಷಣ, ರಿಯಲ್ ಎಸ್ಟೇಟ್ ಬ್ಯಾಂಕುಗಳ ಸಾಲಗಳ ವಸೂಲಾತಿ ಪ್ರಕರಣಗಳು, ಪೋಸ್ಟಲ್, ಶಾಲಾ ಕಾ ಲೇಜಗಳ ಪ್ರವೇಶಗಳ ಸಮಸ್ಯೆ, ಕಸವಿಲೇವಾರಿ ಸಮಸ್ಯೆಗಳು ಕುರಿತು ಸರ್ವಜನಿಕರು ಉಪಯುಕ್ತ ಸೇವೆಗಳ ಕುರಿತು ಅಗತ್ಯ ದಾಖಲೆಗಳೊಂದಿಗೆ ಕಾಯಂ ಜನತಾ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದಾಗ ಅವುಗಳನ್ನು ಪರಿಶೀಲನೆಯನ್ನು ಮಾಡಿ ಅರ್ಜಿದಾರರು ಮತ್ತು ಸಂಬಂದಪಟ್ಟ ಇಲಾಖೆಯವರಿಗೆ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಮಾಡಿ ಇಂತಹ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕವಾಗಿ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದರು.

ಸಾರ್ವಜನಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಕಾಯಂ ಜನತಾ ನ್ಯಾಯಾಲಯದಲ್ಲಿ ಒಬ್ಬರು ಜಿಲ್ಲಾ ನ್ಯಾಯಾದೀಶರು ಅಧ್ಯಕ್ಷರಾಗಿದ್ದು.ಇಬ್ಬರು ವಕೀಲರು ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು. ಸಾರ್ವಜನಿಕರ ಇಂತಹ ಮೂಲ ಸಮಸ್ಯೆಗಳನ್ನು ರಾಜಿ ಸಂಧಾನದ ಮೂಲಕವಾಗಿ ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಸಂಪೂರ್ಣವಾದ ವಿವಿರ ಮತ್ತು ಸಂಬಂಧಪಟ್ಟ ಇಲಾಖೆಯವರ ಮಾಹಿತಿಯನ್ನು ನೀಡಬೇಕೆಂದು ಹೇಳಿದರು.

ಕಾಯಂ ಜನತಾ ನ್ಯಾಯಾಲಯಲಯದಲ್ಲಿ ಮೊದಲು ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುವುದು ಒಂದು ವೇಳೆ ರಾಜಿ ಸಂದಾನವಾಗದಿದ್ದರೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿ ಅವಾರ್ಡ ಮಾಡಲಾಗುತ್ತದೆ. ಕಾಯಂ ಜನತಾ ನ್ಯಾಯಲಯ ನೀಡಿದಷ್ಟೆ ಪರಿಣಾಮಕಾರಿಯಾಗಿರುತ್ತದೆ.

ಕಾಯಂ ಜನತಾ ನ್ಯಾಯಾಲಯದ ನೀಡಿದ ತೀರ್ಪು ಅಂತಿಮವಾಗಿದ್ದು ಇದನ್ನು ಪ್ರಶ್ನಿಸಲು ಮತ್ತು ಅಪೀಲು ಮಾಡುವಂತಿಲ್ಲಾ ಆದರೆ ಉಚ್ಚನ್ಯಾಲಯದಲ್ಲಿ ರಿಟ್ ದಾಖಲಿಸಬಹುದು ಎಂದರು.

ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande