ಸೆ.21 ರಂದು ಕಂದಾಯ ಇಲಾಖಾ ನೌಕರರ ಸರ್ವಸದಸ್ಯರ ಸಭೆ
ಶಿವಮೊಗ್ಗ, 06 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘವು ಇದರ 2024-25 ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಸೆ.21 ಬೆಳಿಗ್ಗೆ 11.25 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಕಾರ ಸಂಘ ಹಾಗೂ ಜಿಲ್ಲಾ ನಿವೃತ್ತ ನೌಕರರ ಸಂಘದ 1 ನೇ ಮಹಡಿಯ ಸ್ಕಿಫ್ಟ್
ಸೆ.21 ರಂದು ಕಂದಾಯ ಇಲಾಖಾ ನೌಕರರ ಸರ್ವಸದಸ್ಯರ ಸಭೆ


ಶಿವಮೊಗ್ಗ, 06 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘವು ಇದರ 2024-25 ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಸೆ.21 ಬೆಳಿಗ್ಗೆ 11.25 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಕಾರ ಸಂಘ ಹಾಗೂ ಜಿಲ್ಲಾ ನಿವೃತ್ತ ನೌಕರರ ಸಂಘದ 1 ನೇ ಮಹಡಿಯ ಸ್ಕಿಫ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಂಘದ ಅಧ್ಯಕ್ಷರಾದ ಶಿವಮೂರ್ತಿ ಎ.ಕೆ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಡಿ.ದಾನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande