ಕೋಲಾರ, 0೫ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಮನುಷ್ಯ ಯಾವುದೇ ಹಂತದಲ್ಲಿ ಪ್ರಗತಿ ಹೊಂದಬೇಕಾದರೆ ಉತ್ತಮ ಹೆಸರು ಮಾಡಬೇಕಾದರೆ ತಂದೆ ತಾಯಿ ಮತ್ತು ಗುರುಗಳ ಬೋಧನೆ ಅತಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಕರ ಸ್ಥಾನ ಮಹತ್ವದ್ದು ಎಂದು ವಿಧಾನ ಪರಿಷತ್ತಿನ ಶಾಸಕ ಎಂ.ಎಲ್. ಅನಿಲ್ ಕುಮಾರ್ ಪ್ರತಿಪಾದಿಸಿದರು.
ಕೋಲಾರ ನಗರದ ಪೇಟೆಚಾಮುನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಕ ತಾನು ಕಲಿತ ವಿದ್ಯೆಯನ್ನು ಸಂಪೂರ್ಣ ವಾಗಿ ತನ್ನ ಹಿತಕ್ಕಾಗಿ ಬಯಸದೆ ಇತರರ ಸೇವೆಗಾಗಿ ಇತರರ ಹಿತಕ್ಕಾಗಿ ಬಯಸುವ ಮೂಲಕ ಸಮಾಜದ ಪ್ರಗತಿಗೆ ತನ್ನ ವಿದ್ಯಾರ್ಥಿ ಗಳ ಅಭಿವೃದ್ಧಿಗೆ ವಿನಿಯೋಗಿಸಿ ಉತ್ತಮ ಸಮಾಜ ನಿರ್ಮಿಸಲು ಕಾರಣರಾಗುತ್ತಾರೆ ಹಾಗಾಗಿ ಕಲಿಕೆ ಶಿಕ್ಷಕರಲ್ಲಿ ನಿರಂತರವಾಗಿ ಸಾಗುತ್ತದೆ ಎಂದರು.
ಶಿಕ್ಷಕ ತನ್ನ ಸಂಪೂರ್ಣ ವಾತಾವರಣದಲ್ಲಿ ನಾನೊಬ್ಬನೇ ಅಲ್ಲದೆ ಇತರರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆಗಿಂದಾಗೆ ತನ್ನ ಬೋಧನೆ ಮೂಲಕ ಸಮಾಜದ ಒಳಿತಿಗಾಗಿ ಸದಾ ಹಾತೊಡೆಯುತ್ತಿರುತ್ತಾರೆ ಎಂದರು .
ಸಮಾರಂಭದಲ್ಲಿ ಆರು ಜನ ಉತ್ತಮ ಶಿಕ್ಷಕರಾದ ರವಿಚಂದ್ರ, ಚಂದ್ರ ಮೌಳಿ, ಮಮತಾ, ಗೌರಮ್ಮ, ಕೆ ವಿ ಗಾಯತ್ರಿ.ಕೆ, ಶಬಾನ ಬೇಗಮ್ ರವರನ್ನು ಉತ್ತಮ ಶಿಕ್ಷಕರು ಎಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಅಲ್ಮಾಸ್ ಪರವೀನ್ ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಡೆ, ತಾಲೂಕು ಕ್ಷೇತ್ರ ಸಮನ್ವಯ ಅಧಿಕಾರಿ ರಾದಮ್ಮ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್ ಅನಿಲ್ ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಿವಿ ನಾಗರಾಜ್, ಖಜಾಂಚಿ ಜಗನ್ನಾಥ್, ಎಲ್.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್