ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಈದ್ ಮಿಲಾದ್ ಹಿನ್ನೆಲೆ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಸಹಯೋಗದಲ್ಲಿ ಶುಕ್ರವಾರ ವಿಜಯಪುರ ನಗರಾದ್ಯಂತ ಮೆರವಣಿಗೆ ಮಾಡಲಾಯಿತು.
ನಗರದ ಹಕೀಂ ವೃತ್ತದಿಂದ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದರು. ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್...', 'ಯಾ ರಸೂಲ್ಲಾಹ ಎಂದು ಹೇಳುತ್ತಾ ಮೆರವಣಿಗೆಯಲ್ಲಿ ಯುವಜನರು ಹೆಜ್ಜೆ ಹಾಕಿದರು.
ಹಸಿರು ವರ್ಣದ ಬೃಹತ್ ಬಾವುಟವನ್ನು ಹಾರಿಸಿದರು. ದಾರಿಯುದ್ದಕ್ಕೂ ಮೆರವಣಿಗೆಗೆ ಪುಷ್ಪಗಳ ಮೂಲಕ ಸ್ವಾಗತ ಕೋರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರಿಗೆ ತಂಪು ಪಾನೀಯ, ಶರಬತ್, ಕುಡಿಯುವ ನೀರು ನೀಡಲಾಯಿತು.
ನಗರದ ಹಕೀಂ ವೃತ್ತದಿಂದ ಆರಂಭವಾದ ಶಾಂತಿಯಾತ್ರೆ ಝಂಡಾ ಕಟ್ಟಾ, ಜಾಮೀಯಾ ಮಸೀದಿ, ಬಡಿಕಮಾನ್, ಅತಾವುಲ್ಲಾ ಸರ್ಕಲ್, ಗಾಂಧೀವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರಬಾರ್ ಹೈಸ್ಕೂಲ್ ತಲುಪಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande