ಕಾನೂನು ಸಚಿವರಿಗೆ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇಲ್ಲವೇ? : ಎಂ.ಎಂ.ಹಿರೇಮಠ
ಗದಗ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆಗೆ ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಮುಗೆಯುವುದರಯೊಳಗೆ ಜನರಿಂದ ಆಡಳಿತ ವಿರೋಧಿ ಅಲೆಗೆ ಗುರಿಯಾಗಿ ಸೊಲುವ ಬೀತಿಯಲ್ಲಿರುವ ಕರ್ನಾಟಕ ಕಾಂಗ್ರೇಸ್ ಸ್ಥಿತಿ
ಪೋಟೋ


ಗದಗ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆಗೆ ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಮುಗೆಯುವುದರಯೊಳಗೆ ಜನರಿಂದ ಆಡಳಿತ ವಿರೋಧಿ ಅಲೆಗೆ ಗುರಿಯಾಗಿ ಸೊಲುವ ಬೀತಿಯಲ್ಲಿರುವ ಕರ್ನಾಟಕ ಕಾಂಗ್ರೇಸ್ ಸ್ಥಿತಿ ಕುಣಿಯಲು ಬಾರದವನಿಗೆ ನೆಲ ಡೊಂಕು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಕಾಂಗ್ರೇಸ್ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಾಗ ಇವಿಎಂ ಕಾರ್ಯ ನಿರ್ವಹಣೆ ಅತ್ಯುತ್ತಮವಾಗಿತ್ತು. ಆಗ ಯಾರೂ ಇವಿಎಂ ಬಗ್ಗೆ ಪ್ರಶ್ನೆ ಮಾಡಲಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಏಕಾಏಕಿ 9 ಸ್ಥಾನ ಹಾಗು ಉಪಚುನಾವಣೆಯಲ್ಲಿ 3 ಸ್ಥಾನ ಗೆದ್ದಾಗ ಇವಿಎಂ ಬಗ್ಗೆ ಒಬ್ಬನೆ ಒಬ್ಬ ನಾಯಕರು ಸೊಲ್ಲೆತ್ತಲಿಲ್ಲಾ. ಫಲಿತಾಂಶ ಕಾಂಗ್ರೇಸ್ ಕಡೆ ಬಂದಾಗ ಜೈ ಎನ್ನುವ ಸ್ಥಿತಿ ಸೋಲುವು ಸುಳಿವು ಗೊತ್ತಾಗುತ್ತಿದ್ದಂತೆ ಇಡೀ ವ್ಯವಸ್ಥೆ ಸರಿಯಿಲ್ಲ ಎನ್ನುವ ಕಾಂಗ್ರೇಸ್ ನೀತಿ ಇದನ್ನು ಅವಕಾಶವಾದಿತನ ಎನ್ನಬೇಕೆ? ಇಲ್ಲವೇ ಆಶಾಢಭೂತಿತನ ಎಂದು ಕರೆಯಬೇಕೆ? ಅಷ್ಟೆ ಯಾಕೆ 2004 ರಿಂದ 2014 ರ ವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೇಸ್ ನೇತೃತ್ವದ ಯುಪಿಎ ಸರ್ಕಾರ ಒಂದೇ ಒಂದು ದಿನ ಇವಿಎಂ ಬಗ್ಗೆ ಮಾತನಾಡಿದ ನಿದರ್ಶನಗಳಿಲ್ಲಾ. ಸಾಲು, ಸಾಲು ಚುನಾವಣೆ ಸೋತು ಮತದಾರರಿಂದ ತಿರಸ್ಕೃತ ವಾಗಿರುವ ಕಾಂಗ್ರೇಸ್ ಇವಿಎಂ ಮೇಲೆ ಸಂಶಯದ ಬೊಟ್ಟು ಮಾಡಿ ಜನರ ಮನಸ್ಸನ್ನು ವಿಷಯಾಂತರ ಮಾಡುವ ವ್ಯರ್ಥ ಪ್ರಯತ್ನೆವೇ ಹೊರತು ಇದರಲ್ಲಿ ಬೇರೆ ಏನೂ ಇಲ್ಲಾ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ತರುವ ಪ್ರಯತ್ನ ಸೋಲುವ ಮುನ್ಸೂಚನೆಯಾಗಿದೆ. ಸಾಲು, ಸಾಲು ಬ್ರಷ್ಟಾಚಾರ, ಸಚಿವರ ರಾಜೀನಾಮೆ, ನಿಗಮ ಮಂಡಳಿಯಲ್ಲಿ ಅಧ್ಯಕ್ಷರಿಂದಲೇ ಕಮಿಷನ್‍ಗೆ ಬೇಡಿಕೆ ಇದು ಕಾಂಗ್ರೇಸ್ ಸರ್ಕಾರದ ಮಹಾನ್ ಸಾಧನೆ. ಚುನಾವಣಾ ಪ್ರಕ್ರಿಯೇಯಲ್ಲಿ ಮೊದಲು ನಂಬಿಕೆ ಇಟ್ಟುಕೊಳ್ಳಿ, ವ್ಯವಸ್ಥೆಯನ್ನು ಉರುಳಿಸಲು ಪ್ರಯತ್ನಸಬೇಡಿ ಎಂದು ಸುಪ್ರಿಂ ಕೋರ್ಟ್ ಹೇಳಿರುವುದನ್ನು ಕಾಂಗ್ರೇಸ್ ಮರೆತಂತಿದೆ. ಕಾನೂನು ಸಚಿವರಿಗೆ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇಲ್ಲವೇ?. ಕೇವಲ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರನ್ನು ಮೇಚ್ಚಿಸಲು ರಾಜ್ಯ ಕಾಂಗ್ರೇಸ್ ಸರ್ಕಾರ ಈ ರೀತಿ ತೀರ್ಮಾನ ತೆಗೆದುಕೊಂಡಿರುವದು ಸರಿಯಲ್ಲ. ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್‍ನಲ್ಲಿ ಪಿಆಯ್‍ಎಲ್ ಹಾಕಿದಾಗ ನ್ಯಾಯಾಲಯ ಏನು ತೀರ್ಪು ನೀಡಿದೆ ಎಂಬುದನ್ನು ಒಮ್ಮೆ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಂಡು ತಿದ್ದುಪಡೆಗೆ ನಂತರ ಶೀಫಾರಸ್ಸು ಮಾಡಿದರೆ ಒಳಿತು. ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಪುನಃ ಗುಂಡಾ ರಾಜ್ಯ ಸ್ಥಾಪಿಸಲು ಕಾಂಗ್ರೇಸ್ ನಾಯಕರು ಹುನ್ನಾರ ನಡೆಸಿದ್ದು ಕೂಡಲೇ ಇವಿಎಂ ಪ್ರಕಾರ ಚುನಾವಣೆ ನಡೆಸಬೇಕೆಂದು ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠ, ಸಹ ವಕ್ತಾರ ದತ್ತಣ್ಣ ಜೋಶಿ, ಮಾಧ್ಯಮ ಪ್ರಮುಖ ರಾಜು ಹೊಂಗಲ, ಸಹ ಪ್ರಮುಖ ಶ್ರೀನಿವಾಸ ಹುಬ್ಬಳ್ಳಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿರುವರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande