ಅಶೋಕ ಬಿಜ್ಜಳರಿಗೆ ಉತ್ತಮ ಔಷಧ ತಜ್ಞ ಪುರಸ್ಕಾರ
ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವ ಔಷಧ ತಜ್ಞರ ದಿನಾಚರಣೆ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ ಇಲಾಖೆಯಿಂದ ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಔಷಧ ತಜ್ಞ ಪುರಸ್ಕಾರಕ್ಕೆ ಇಲಕಲ್ಲಿನ ಅಶೋಕ ಬಿಜ್ಜಳ ಭಾಜನರಾಗಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಅ
ಪ್ರಶಸ್ತಿ


ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವ ಔಷಧ ತಜ್ಞರ ದಿನಾಚರಣೆ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ ಇಲಾಖೆಯಿಂದ ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಔಷಧ ತಜ್ಞ ಪುರಸ್ಕಾರಕ್ಕೆ ಇಲಕಲ್ಲಿನ ಅಶೋಕ ಬಿಜ್ಜಳ ಭಾಜನರಾಗಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಅವರು ಪ್ರಶಸ್ತಿಗೆ ಭಾಜನರಾದ ಅಶೋಕ ಬಿಜ್ಜಳ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಔಷಧ ನಿಯಂತ್ರಕರಾದ ಶರಣಬಸಪ್ಪ ಹನಮನಾಳ, ಶ್ವೇತಾ ನಾರಾಯಣ, ಔಷಧಿ ಪರಿವೀಕ್ಷಕ ಅರುಣ ಕಟಾರಿ, ಆಹಾರ ಸುರಕ್ಷತಾ ಇಲಾಖೆಯ ರಾಜಶೇಖರ ಸಾಲಗುಂದಿ ಸೇರಿದಂತೆ ಜಿಲ್ಲಾ ಔಷಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande