ಹಾಲು ದುಡ್ಡು ತಿಂದವರು ಯಾರು ಉದ್ದಾರ ಆಗಲ್ಲ : ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್
ಹಾಲು ದುಡ್ಡು ತಿಂದವರು ಯಾರು ಉದ್ದಾರ ಆಗಲ್ಲ : ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್,
ಚಿತ್ರ : ಕೋಲಾರ ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ಉದ್ಘಾಟಿಸಿ ಮಾತನಾಡಿದರು.


ಕೋಲಾರ, ೨೪ ಸೆಪ್ಟಂಬರ್ (ಹಿ.ಸ.) :

ಆ್ಯಂಕರ್ : ಕೋಲಾರ ಜಿಲ್ಲೆಯ ಬಹುತೇಕ ಜನರ ಜೀವನಾಧಾರ ಹೈನುಗಾರಿಕೆಯಾಗಿದೆ. ಮಹಿಳೆಯರು ಮತ್ತು ರೈತರ ಬೆವರು ಇದರಲ್ಲಿ ಅಡಗಿದೆ.ಹಾಲಿನ ಹಣ ತಿಂದವರು ಯಾವುದೇ ಕಾರಣಕ್ಕೂ ಉದ್ದಾರವಾಗಲ್ಲ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ತಿಳಿಸಿದರು.

ಕೋಲಾರ ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಹಾಲಿಗೂ ನೀರಿಗೂ ತುಂಬಾ ವ್ಯತ್ಯಾಸವಿದೆ. ಕಲಬೆರಕೆ ಮಾಡಬೇಡಿ. ಯಾವುದಾದರೂ ತಪ್ಪು ಕಂಡುಬಂದರೆ ಕೂಡಲೇ ಪ್ರಶ್ನೆ ಮಾಡಬೇಕು. ಹಾಲಿನ ದುಡ್ಡು ತಿನ್ನಂದರೆ ರೈತರು ಮಹಿಳೆಯರ ಶಾಪ ತಟ್ಟುತ್ತದೆ ಹಾಲು ದುಡ್ಡು ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಚಂಜಿಮಲೆ ಡೇರಿಯಲ್ಲಿ ಈ ಸಾಲಿನಲ್ಲಿ ೧೩ ಲಕ್ಷ ವ್ಯಾಪಾರ ಗಳಿಸಿದ್ದು ಅದರಲ್ಲಿ ೭.೪೬ ಲಕ್ಷದಷ್ಟು ನಿವ್ವಳ ಲಾಭಗಳಿಸಿದೆ ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ಲಾಭಾಂಶವನ್ನು ಪಡೆಯಬೇಕು ಕಾಲಕಾಲಕ್ಕೆ ರಾಸುಗಳಿಗೆ ವಿಮೆ, ವಾಕ್ಸಿನ್ ಮಾಡಿಸಬೇಕು ಜೊತೆಗೆ ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆ ಮಾಡಿಸಿ ಅದರ ಪ್ರಯೋಜನವನ್ನು ಪಡೆಯಬೇಕು ಕೋಮುಲ್ ವತಿಯಿಂದ ಎಂವಿಕೆ ಡೇರಿ, ಸೋಲಾರ್ ಘಟಕದ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಒಕ್ಕೂಟ ಮಾಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಮುನೇಶ್ ಮಾತನಾಡಿ ಒಕ್ಕೂಟಕ್ಕೆ ಸಂಘಗಳು ಆಧಾರಸ್ಥಂಭವಾಗಿದ್ದು ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹಣ ಪೋಲು ಆಗದಂತೆ ಚಂಜಿಮಲೆ ಡೇರಿಯಿಂದ ಪ್ರತಿನಿಧಿಸಿ ಆಯ್ಕೆಯಾದ ಕೋಮುಲ್ ನೂತನ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ ಮಹಿಳೆಯರು ರೈತರ ಧ್ವನಿಯಾಗಿ ಕೋಮುಲ್ ಆಡಳಿತ ಮಂಡಳಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಚಂಜಿಮಲೆ ಡೇರಿ ಉಪಾಧ್ಯಕ್ಷ ಎನ್ ಶ್ರೀರಾಮಪ್ಪ, ನಿರ್ದೇಶಕರಾದ ಇ ಚಂದ್ರಪ್ಪ, ನರಸಿಂಹಪ್ಪ, ಪ್ರಸನ್ನ, ಅಲ್ಲಾಭಕಾಷ್, ದೇವರಾಜ್, ರಾಜಪ್ಪ, ಪುಷ್ಪ, ಗೌರಮ್ಮ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎನ್ ಪಾಪಣ್ಣ, ಹಾಲು ಪರೀಕ್ಷಕ ಶ್ರೀನಿವಾಸಯ್ಯ, ಸಹಾಯಕ ಮೋಹನ್ ಸೇರಿದಂತೆ ಹಾಲು ಉತ್ಪಾದಕರ ಗ್ರಾಮಸ್ಥರು ಇದ್ದರು.

ಚಿತ್ರ : ಕೋಲಾರ ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ಉದ್ಘಾಟಿಸಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande