ಕೋಲಾರ, ೨೪ ಸೆಪ್ಟಂಬರ್ (ಹಿ.ಸ.) :
ಆ್ಯಂಕರ್ : ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸುಂಟರ ಗಾಳಿ ಎದ್ದಿದೆ. ಮಾಲೂರು ವಿಧಾನಸಭಾ ಚುನಾವಣೆಯ ಮತಗಳ ಎಣಿಕೆಯಲ್ಲಿ ಅಕ್ರಮಗಳು ನಡೆದಿರುವ ಕಾರಣ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಮತಗಳ ಮರು ಎಣಿಕೆಗೆ ಆದೇಶ ಮಾಡಿದೆ.
ಹೈಕೊರ್ಟ್ ಆದೇಶ ಮಾಡುತ್ತಿದ್ದಂತೆ ಮಾಜಿ ಶಾಸಕ ಮಂಜುನಾಥ ಗೌಡರ ಅನುಯಾಯಿಗಳು ಸಿಹಿ ಹಂಚಿ ಪಟಾಕಿ ಸಡಿಸಿ ಸಂಭ್ರಮಿಸಿದ್ದರು.ಇದರ ಬೆನ್ನಲ್ಲೇ ಶಾಸಕ ನಂಜೇ ಗೌಡರು ಮಾಲೂರು ತಾಲ್ಲೂಕಿನ ತಮ್ಮ ನಿವಾಸದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಮಂಜುನಾಥ ಗೌಡ ಒಬ್ಬ ಹುಚ್ಚ. ಶಾಸಕನಾಗುವುದಾಗಿ ಹಗಲು ಕನಸು ಕಾಣುತ್ತಿದ್ಧಾನೆ.ಅವನ ಬೆಂಬಲಿಗರು ಹುಚ್ಚರಾಗಿದ್ದಾರೆ.ಯಾವ ಕಾಲಕ್ಕೆ ಶಾಸಕನಾಗಬೇಕು. ಅವನ ಜನ್ಮದಲ್ಲಿ ಶಾಸಕನಾಗುವುದಿಲ್ಲ ಎಂದು ಛೇಡಿಸಿದ್ದರು.
ಶಾಸಕ ನಂಜೇ ಗೌಡರ ಈ ಹೇಳಿಕೆ ಮಂಜುನಾಥ ಗೌಡರನ್ನು ಕೆರಳಿಸಿತ್ತು.ತಮ್ಮ ಬೆಂಬಲಿಗರ ಸಭೆ ನಡೆಸಿ ನಂಜೇ ಗೌಡರ ವಿರುಧ್ಧ ಮುಗಿ ಬಿದ್ದಿದ್ದರು.ಅಲ್ಲದೆ ವೈಯುಕ್ತಿವಾಗಿ ನಿಂದನೆ ಮಾಡಿದ್ದರು. ನಂಜೇ ಗೌಡರು ಭ್ರಷ್ಠಚಾರದ ಪಿತಾಮಹಾ ಆಗಿದ್ದಾರೆ. ರಾಜಕೀಯವಾಗಿ ಬೆಂಬಲಿಸಿದವರಿಗೆ ದ್ರೋಹ ಬಗೆದಿದ್ದಾರೆ. ಜೈಲಿಗೆ ಹೋಗ ಬೇಕಾಗಿದ್ದ ನಂಜೇಗೌಡರನ್ನು ಮುನಿಯಪ್ಪ ರಕ್ಷಣೆ ಮಾಡಿದರು. ಮಾಲೂರು ತಾಲ್ಲೂಕಿನಲ್ಲಿ ನಂಜೇಗೌಡರನ್ನು ಕೈಹಿಡಿದು ರಾಜಕೀಯವಾಗಿ ಎ.ನಾಗರಾಜು ಮುನ್ನಡೆಸಿದರು.ಆದರೆ ತನ್ನನ್ನು ರಾಜಕೀಯವಾಗಿ ಬೆಳೆಸಿದ ನಾಯಕರ ಬೆನ್ನಿಗೆ ನಂಜೇ ಗೌಡರು ಇರಿದರು. ನೇಪಾಳ್ನಲ್ಲಿ ಜನ ಭ್ರಷ್ಠ ನಾಯಕರ ವಿರುಧ್ಧ ದಂಗೆ ಎದ್ದರು.ಅದೇ ರೀತಿ ನಂಜೇ ಗೌಡರ ವಿರುಧ್ದ ಜನ ದಂಗೆ ಏಳಲಿದ್ದಾರೆ.ಸರ್ವಾಧಿಕಾರಿಗಳಾದ ಸದ್ದಾಮ್ ಹುಸೇನ್ ಜನರಲ್ ಗಡಾಫಿಯಾರವರಿಗೆ ಆದ ಗತಿ ನಂಜೇ ಗೌಡರಿಗೆ ಆಗುತ್ತದೆ.ಇನ್ನು ಮುಂದೆ ನಾನು ಸುಮ್ಮನೇ ಕೈಕಟ್ಟಿ ಕುಳಿತಿರುವುದಿಲ್ಲ. ನಂಜೇ ಗೌಡರ ಮುಖವಾಡ ಕಳುಚುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
ಕೇಂದ್ರ ಸರ್ಕಾರದ ಇ.ಡಿ. ತನಿಖಾ ಸಂಸ್ಥೆ ಇದೇ. ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಬೇಟಿ ಮಾಡಿ ನಂಜೇ ಗೌಡರ ಭ್ರಷ್ಠಚಾರದ ತನಿಖೆ ಮಾಡುವಂತೆ ಕೋರುತ್ತೇನೆ.ಮಾಲೂರು ಸರ್ಕಾರಿ ಕಛೇರಿಗಳು ಭ್ರಷ್ಠಚಾರದ ಕೂಪಗಳಾಗಿವೆ.ಅಧಿಕಾರಿಗಳ ವರ್ಗಾವಣೆಗೆ ದೊಡ್ಡ ಮೊತ್ತದ ಹಣ ವಸೂಲಿ ಮಾಡಲಾಗಿದೆ.ನಂಜೇ ಗೌಡರು ಪ್ರತಿ ಸರ್ಕಾರಿ ಕಛೇರಿಯಿಂದ ಹಪ್ತಾ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿದ್ದರು.
ಅಲ್ಲದೆ ನಂಜೇ ಗೌಡರನ್ನು ವೈಯುಕ್ತಿವಾಗಿ ಟೀಕೆ ಮಾಡಿ ಜೇಜೋವಧೆ ಮಾಡಿದ್ದರು. ಮಂಜುನಾಥ ಗೌಡರ ಈ ಹೇಳಿಕೆ ಮಾಲೂರು ತಾಲ್ಲೂಕಿನಲ್ಲಿ ರಾಜಕೀಯವಾಗಿ ಸಂಚಲನ ಸೃಷ್ಠಿ ಮಾಡಿತ್ತು.
ಶಾಸಕ ನಂಜೇ ಗೌಡರು ಪ್ರತ್ಯೇಕವಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿ ಮಂಜುನಾಥ ಗೌಡರ ವಿರುಧ್ಧ ವಾಗ್ದಾಳಿ ನಡೆಸಿದರು. ಮಂಜುನಾಥ ಗೌಡ ಚಾರಿತ್ರ್ಯಹೀನ ವ್ಯಕ್ತಿಯಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲ. ಹೊಸ ಕೋಟೆ ತಾಲ್ಲಕಿನಲ್ಲಿ ಹಲವಾರು ಕಾನೂನು ಬಾಹೀರ ಕೃತ್ಯಗಳನ್ನು ನಡೆಸಿದ್ದಾರೆ.ಸರ್ಕಾರಿ ಜಮೀನುಗಳನ್ನು ಕಬಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆ.ಡಿ.ಎಸ್ ಟಿಕೆಟ್ ಕೊಡಿಸಲು ಕೊಮ್ಮನಹಳ್ಳಿಯ ನನ್ನ ಮನೆಯಲ್ಲಿ ಮುಖಂಡರ ಸಭೆ ನಡೆಯಿತು. ಆ ಸಭೆಯಲ್ಲಿ ನಾನು ಆನೇಪುರದ ಹನುಮಂತಪ್ಪ ಹಾಗು ಇತರ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರು ನನಗೆ ಟಿಕಟ್ ಕೊಡಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.ಆದರೆ ಚಲನ ಚಿತ್ರ ನಿರ್ಮಾಪಕ ಮನೋಹರ್ ಬಳಿ ಒಳ ಒಪ್ಪಂದ ಮಾಡಿಕೊಂಡಿದ್ದ ಮಂಜಿನಾಥ ಗೌಡರು ನನಗೆ ಟಿಕಟ್ ಕೊಡಿಸಲು ನಿರಾಕರಿಸಿದರು. ಆನೇಪುರದ ಹನುಮಂತಪ್ಪನವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು.ಆ ದಿನವೇ ನನ್ನ ಮನೆಯಿಂದ ಹೊರನಡೆಯುವಂತೆ ಹೇಳಿದೆ. ಅಂದಿನಿಂದ ಮಂಜುನಾಥ ಗೌಡರ ಸಹವಾಸಕ್ಕೆ ಎಳ್ಳು ನೀರು ಬಿಟ್ಟು ದೂರ ಉಳಿದೆ ಎಂದು ತಿರುಗೇಟು ನೀಡಿದರು.
ಸಂಸತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿಯಾಗಿದ್ದ ಕೇಶವರವರನ್ನು ಸುಲಿಗೆ ಮಾಡಿ ಕೋಟಿಗಟ್ಟಲೇ ಮಂಜುನಾಥ ಗೌಡ ದೋಚಿದರು.ಕೇಶವ ಚುನಾವಣಾ ಕಣದಿಂದ ಓಡಿಹೋಗಿದ್ದಾರೆ ಎಂದು ಅಪಪ್ರಚಾರ ಮಾಡಿ ದ್ರೋಹ ಬಗೆದ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಕಾರಣ ಮಾಲೂರು ನಾಗರಾಜುರವರು ಪಕ್ಷ ತೊರೆದು ಜೆ.ಡಿ.ಎಸ್ಗೆ ಹೋದರು.ಅವರೊಡನೇ ನಾನು ಸಹ ಜೆಡಿಎಸ್ಗೆ ಹೋದೆ.ಅವರ ಬಗ್ಗೆ ಅಪಾರವಾದ ಗೌರವವಿದೆ. ಸಂಸತ್ ಚುನಾವಣೆಯಲ್ಲಿ ನಾನು ಮತ್ತು ಕೆ.ಜಿ.ಎಫ್ ಶಾಸಕಿ ರೂಪಕಲಾ ಶಶಿಧರ್ ಕೆ.ಹೆ.ಚ್ .ಮುನಿಯಪ್ಪನವರಿಗೆ ಬಹುಮತಕೊಡಿಸಿದೆವು. ನಾನು ಕೆ.ಹೆಚ್. ಮುನಿಯಪ್ಪನವರ ವಿರುಧ್ಧ ಕೆಲಸ ಮಾಡಿದೆ ಎಂದು ಮಂಜುನಾಥ ಗೌಡ ಹೇಳಿರುವುದು ಶುಧ್ಧ ಸುಳ್ಳು ಆಗಿದೆ ಎಂದು ಸ್ಪಷ್ಟಪಡಿಸಿದರು.
ನನ್ನ ಕುಟುಂವನ್ನು ಮಂಜುನಾಥ ಗೌಡ ವೈಯುಕ್ತಿವಾಗಿ ನಿಂದನೇ ಮಾಡಿದ್ದಾನೆ.ನಮ್ಮದು ಗೌರವಯುತ ಕುಟುಂಬವಾಗಿದೆ. ಮಂಜುನಾಥ ಗೌಡರ ಹೇಳಿಕೆಯಿಂದ ನನ್ನ ಇಡೀ ಕುಟುಂಬ ನೊಂದಿದೆ ಎಂದು ನಂಜೇ ಗೌಡರು ಕಣ್ಣೀರು ಹಾಕಿದರು. ನನ್ನ ತಾಯಿ ನಾನು ಶಾಸಕನಾಗಬೇಕೆಂದು ಕನಸು ಕಂಡಿದ್ದರು.ಮಾಲೂರು ತಾಲ್ಲೂಕಿನ ಜನರ ಮತ್ತು ನನ್ನ ತಾಯಿಯ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ.ನನ್ನನ್ನು ಕೊಮ್ಮನಹಳ್ಳಿಯಿಂದ ಹೊರಹಾಕುವುದಾಗಿ ಮಂಜುನಾಥ ಗೌಡ ಹೇಳಿದ್ದಾನೆ. ನಾನು ಹುಟ್ಟಿ ಬೆಳೆದ ಗ್ರಾಮದಿಂದ ಹೊರಹಾಕಲು ಮಂಜುನಾಥ ಗೌಡ ಯಾವೂರ ದಾಸಪ್ಪ.ನಾನೇನು ಹೊಸಕೋಟೆಯಿಂದ ಮಾಲೂರಿಗೆ ಬಂದಿಲ್ಲ. ಮಾಲೂರಿನಲ್ಲಿ ಮಂಜುನಾಥ ಗೌಡನ ಗೂಂಡಾಗಿರಿ ನಡೆಯುವುದಿಲ್ಲ.ಇಲ್ಲಿ ಯಾರು ಹೆದರುವುದಿಲ್ಲ.ನಾನು ಬೆಂಗಳೂರಿನಲ್ಲಿ ಆಸ್ಥಿ ಮಾಡಿಲ್ಲ.ನನ್ನ ಮಗ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದಾನೆ ಕಷ್ಟಪಟ್ಟು ದುಡಿದು ವ್ಯಾಪಾರ ಮಾಡಿದ್ದೇನೆ. ಮಂಜುನಾಥ ಗೌಡರ ಬೆದರಿಕೆಗಳಿಗೆ ಹೆದುರುವುದಿಲ್ಲ ಎಂದು ತಿಳಿಸಿದರು.
ಮಂಜುನಾಥ ಗೌಡರು ಶಾಸಕ ನಂಜೇಗೌಡರನ್ನು ವೈಯುಕ್ತಿವಾಗಿ ನಿಂದನೇ ಮಾಡಿದ್ದು ಅವರ ವಿರುಧ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಶೀಲ್ದಾರ್ ಮತ್ತು ಪೋಲೀಸರಿಗೆ ದೂರು ನೀಡಿದರು.
ಚಿತ್ರ : ಮಾಲೂರು ಶಾಸಕ ಕೆ.ವೈ. ನಂಜೇ ಗೌಡರು ಮಾಲೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು,
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್