ಕೋಲಾರ, ೨೧ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ತಾಲೂಕಿನ ಸುಗಟೂರು ವಿವಿಧೋದ್ದೇಶ ಪಾಥಮಿಕ ಕೃಷಿ ಗಾಮೀಣ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಎ.ಸಿ ಭಾಸ್ಕರ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ಉತ್ತಮ ಪ್ರಗತಿ ಸಾಧಿಸುತ್ತಿದ್ದ ಕಾರಣದಿಂದಲೇ ಕೇಂದ್ರ ಬ್ಯಾಂಕಿನಿAದ ಹೆಚ್ಚಿನ ಸಾಲ ಪಡೆಯಲು ಸಹಕಾರಿಯಾಗುತ್ತದೆ ಸಹಕಾರಿ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ, ಪಕ್ಷಪಾತದಿಂದ ಮುಕ್ತರಾದಲ್ಲಿ ಮಾತ್ರ ಸದಸ್ಯರು ರೈತರ ಹಿತ ಕಾಪಾಡಲು ಸಾಧ್ಯವಾಗಲಿದೆ. ಸಂಘವು ಕೇವಲ ವ್ಯಾಪಾರ ವಹಿವಾಟು ನಡೆಸಿ ಲಾಭ ಗಳಿಸಲು ಮಾತ್ರ ಸೀಮಿತಗೊಳ್ಳದೆ ರೈತರಿಗೆ ಸೌಲಭ್ಯಗಳನ್ನು ನೀಡಿ ಪೋತ್ಸಾಹ ನೀಡಲಾಗುತ್ತಿದೆ. ಈ ಸಾಲಿನಲ್ಲಿ ೮.೮೮ ಲಕ್ಷ ಲಾಭಾಂಶವನ್ನು ಗಳಿಸಿದೆ ಎಂದು ತಿಳಿಸಿದರು.
ಸುಗಟೂರು ಸಹಕಾರ ಸಂಘಗಳ ನೇತೃತ್ವದಲ್ಲಿ ರೈತರಿಗೆ ವಿವಿಧ ಕಂಪನಿಗಳಿ0ದ ರಸಗೊಬ್ಬರಗಳನ್ನು ತರಿಸಿ ಸುಮಾರು ೮೪ ಲಕ್ಷ ರೂಗಳ ಗೊಬ್ಬರಗಳನ್ನು ಮಾರಾಟ ಮಾಡಲಾಗಿದೆ ಮದನಹಳ್ಳಿ ಶಾಖೆಯಲ್ಲಿ ಸುಮಾರು ೩೩ ಲಕ್ಷ ರೂಗಳ ಅಷ್ಟು ರಾಸುಗಳಿಗೆ ಬೂಸ ಮತ್ತು ಹಿಂಡಿಯನ್ನು ನೀಡಲಾಗಿದೆ ರೈತರಿಗೆ ಕೆಸಿಸಿ ಸಾಲವಾಗಿ ಸುಮಾರು ೫೨೫ ಜನ ರೈತರಿಗೆ ೬.೮೦ ಕೋಟಿ ರೂಗಳನ್ನು ವಿತರಣೆ ಮಾಡಿದ್ದು ೨೫ ಜನ ರೈತರಿಂದ ೨೪.೮ ಲಕ್ಷ ರೂಗಳು ಸುಸ್ತಿ ಆಗಿದ್ದು, ಸಂಘದಿAದ ೪ ಜನ ರೈತರಿಗೆ ೭.೫ ಲಕ್ಷ ರೂ ಗಳನ್ನು ಕೆಸಿಸಿ ನೇರ ಸಾಲವಾಗಿ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು
ರೇಷ್ಮೆ ಹುಳುಮನೆಗೆ ಸಾಲವಾಗಿ ೧೧ ಜನ ರೈತರಿಗೆ ರೂ ೭೯.೭೦ ಲಕ್ಷ ರೂಗಳನ್ನು ವಿತರಣೆ ಮಾಡಿದ್ದು, ಇದರಲ್ಲಿ ೨೨.೨೬ ಲಕ್ಷ ರೂಗಳು ವಸೂಲಿ ಆಗದೆ ಸುಸ್ತಿ ಆಗಿದೆ ಸುಮಾರು ೪೪೦ ಸ್ವ ಸಹಾಯ ಸಂಘಗಳಿಗೆ ೨೨ ಕೋಟಿ ಸಾಲವನ್ನು ನೀಡಿದ್ದು, ಅದರಲ್ಲಿ ಸುಮಾರು ೧೬.೮೦ ಕೋಟಿ ರೂ ಗಳನ್ನು ವಸೂಲಿ ಮಾಡಿದ್ದು, ಇನ್ನು ಸುಮಾರು ೫.೨೫ ಕೋಟಿ ರೂಗಳು ವಸೂಲಿ ಅಗಬೇಕಾಗಿದೆ ಅದರಲ್ಲಿ ಸುಮಾರು ೯೦ ಲಕ್ಷ ರೂಗಳು ಸುಸ್ತಿ ಆಗಿದೆ.ಸಂಘದ ಹಣಕಾಸಿನ ವ್ಯವಹಾರವನ್ನು ಆನ್ ಲೈನ್ ಮುಖಾಂತರ ನಡೆಸಲಾಗುತ್ತಿದೆ ಸಂಘದಿAದ ಸುಮಾರು ೫೩೦೦ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡುತ್ತಿದ್ದೇವೆ ಸೊಸೈಟಿ ಜನಸ್ನೇಹಿಯಾಗಿ ನಡೆಸಲು ನಿರ್ದೇಶಕರು ಮತ್ತು ಸಿಬ್ಬಂದಿ ಸಹಕಾರವೇ ಕಾರಣವಾಗಿದೆ ಎಂದರು.
ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಟಿ.ವಿ ಕೃಷ್ಣಪ್ಪ, ಗೋಪಾಲಪ್ಪ ಹನುಮೇಗೌಡ, ಶಂಕರ್ ರೆಡ್ಡಿ, ಗೋಪಾಲಕೃಷ್ಣ, ಮುನಿವೆಂಕಟಪ್ಪ, ಶ್ಯಾಮಲಾ ರಮೇಶ್, ಸವಿತಾ ನಾಗೇಂದ್ರ ಶೆಟ್ಟಿ, ರಮೇಶ್ ಬಾಬು, ಗೋಪಾಲಗೌಡ, ಸೈಯದ್ ಸಿರಾಜ್, ನಾರಾಯಣಸ್ವಾಮಿ, ಸಿಇಒ ಎಂ.ಪುಟ್ಟರಾಜು ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಸುಗಟೂರು ವಿವಿದ್ದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆ. ಅಧ್ಯಕ್ಷ ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್