ಕೋಲಾರ, ೨೧ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ಮಧ್ವಾಚಾರ್ಯರ ನಾಲ್ಕು ಸಾಕ್ಷಾತ್ ಶಿಷ್ಯರಲ್ಲಿ ಒಬ್ಬರಾದ ಶ್ರೀಮನ್ಮಾಧವತೀರ್ಥರ ಆರಾಧನಾ ಮಹೋತ್ಸವ ಭಾನುವಾರ ತಾಲೂಕಿನ ತಂಬಿಹಳ್ಳಿ ಶ್ರೀಮನ್ಮಾಧವ ತೀರ್ಥ ಮೂಲ ಮಹಾಸಂಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಆರಾಧನೆಯ ಪ್ರಯುಕ್ತ ಭಾನುವಾರ ಶ್ರೀಮನ್ಮಾಧವತೀರ್ಥರ ಬೃಂದಾವನಕ್ಕೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ಶ್ರೀವೀರರಾಮ ದೇವರ ಸಂಸ್ಥಾನ ಪೂಜೆ, ಬೆಣ್ಣೆ ಅಲಂಕಾರ, ರಥೋತ್ಸವಗಳು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀವಿದ್ಯಾ ವಲ್ಲಭ ಮಾಧವತೀರ್ಥ ಶ್ರೀಗಳವರ ಸಾನಿಧ್ಯದಲ್ಲಿ ನೆರವೇರಿತು.
ಶ್ರೀಮಠದ ಕಾರ್ಯದರ್ಶಿ ಕಂಬಾಲೂರು ಸಮೀರಾಚಾರ್ಯ, ಪ್ರಮುಖರಾದ ಮಡಿ ವೆಂಕಟೇಶಾಚಾರ್, ಮುಳಬಾಗಿಲು ವ್ಯಾಸರಾವ್, ಬಂಗಾರಪೇಟೆ ಮುಕುಂದಾಚಾರ್ಯ, ಬಿ.ಜಿ. ಸುದರ್ಶನ ಚಂದ್ರ, ಆಯಾಚಿತ ಅರುಣ್ ಕುಮಾರ್ ಆರಾಧನಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಚಿತ್ರ : ಕೋಲಾರದ ತಂಬಳ್ಳಿ ಮಠದ ಬೃಂದಾವನ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್