ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ಕುರುಬ ಎಂದು ನಮೂದಿಸಲು ಮನವಿ
ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ಕುರುಬ ಎಂದು ನಮೂದಿಸಲು ಮನವಿ
ಚಿತ್ರ : ಮುಳಬಾಗಿಲು ನಗರದ ಕುರುಬರ ಪೇಟೆಯಲ್ಲಿರುವ ಕನಕ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮುದಾಯ ಮುಖಂಡರ ಸಭೆ ನಡೆಯಿತು.


ಕೋಲಾರ,೨೦ಸೆಪ್ಟೆಂಬರ್ (ಹಿ.ಸ.)ಆಂಕರ್ : ಸಪ್ಟೆಂಬರ್ ೨೨ ರಿಂದ ಪ್ರಾರಂಭವಾಗುವ ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ತಮ್ಮ ಜಾತಿಯ ಕಾಲಂನಲ್ಲಿ ಹಾಗೂ ಉಪಜಾತಿ ಕಾಲಂನಲ್ಲಿಯೂ ಸಹ ಕುರುಬ ಎಂದು ನಮೂದಿಸಬೇಕು ಎಂದು ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್ ಆರ್ ವೆಂಕಟೇಶಪ್ಪ ತಿಳಿಸಿದರು.

ಮುಳಬಾಗಿಲು ನಗರದ ಕುರುಬರ ಪೇಟೆಯಲ್ಲಿರುವ ಕನಕ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮುದಾಯ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ವತಿಯಿಂದ ಜಾತಿ ಗಣತಿ ಸಮೀಕ್ಷೆ ಆರಂಭವಾಗುತ್ತಿದ್ದು, ಇದಕ್ಕೆ ಸಮುದಾಯದ ಎಲ್ಲಾ ಜನರು ಸಹ ಸಮೀಕ್ಷೆದಾರರಿಗೆ ಸಹಕಾರ ನೀಡಿ ಜಾತಿ ಕಾಲಂನಲ್ಲಿ ಕುರುಬ ಎಂದು ನಮೂದಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಸಮೀಕ್ಷೆಗೆ ಬರುವ ಶಿಕ್ಷಕರ ಬಳಿ ತುಂಬಾ ಅನ್ಯೋನ್ಯತೆ ಹಾಗೂ ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗದೆ ನಮ್ಮ ಜಾತಿಯ ಹೆಸರನ್ನು ಹೇಳಬೇಕು. ಇದರೊಂದಿಗೆ ಆ ಕುಟುಂಬದ ಕೆಲವೊಂದು ವಿಷಯಗಳನ್ನು ಸಹ ತುಂಬಾ ಸಂಕ್ಷಿಪ್ತವಾಗಿ ಸರಳವಾಗಿ ಹೇಳಿ ಜಾತಿಗಣತಿಯಲ್ಲಿ ಸೇರಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಜನರು ಆ ಕುಟುಂಬದ ಸದಸ್ಯರ ಬಗ್ಗೆ ವಿವರಣೆ ನೀಡಲು ಗೊಂದಲಗಳನ್ನು ಪಡುತ್ತಾರೆ. ಇದರಿಂದ ಸಮೀಕ್ಷೆದಾರರಿಗೆ ಸಮಸ್ಯೆಗಳು ಆಗುತ್ತದೆ. ಆದ್ದರಿಂದ ತಿಳುವಳಿಕೆ ಇರುವವರು ಸಮೀಕ್ಷೆದಾರರಿಗೆ ಉತ್ತಮವಾಗಿ ಸಂವಹನ ನಡೆಸಿ ಸಮೀಕ್ಷೆಗೆ ಸಹಕರಿಸಬೇಕು ಎಂದು ನುಡಿದರು.

ಜಾತಿಗಣಿತಿ ಸಮೀಕ್ಷೆಯನ್ನು ಯಾರೊಬ್ಬರೂ ಸಹ ಕಿಳರೀಮೆ ಮನೋಭಾವನೆ ಹಾಗೂ ತತ್ಸಾರದಿಂದ ಕಾಣಬಾರದು. ಏಕೆಂದರೆ ಈ ಸಮೀಕ್ಷೆಯಿಂದ ಕುರುಬ ಜಾತಿಯ ಜನಸಂಖ್ಯೆ ತಿಳಿಯುತ್ತದೆ. ಇದರಿಂದ ಜನಾಂಗದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಮತ್ತಷ್ಟು ಬಲಿಷ್ಠವಾಗಲು ಈ ಸಮೀಕ್ಷೆ ಅನುಕೂಲ ಆಗಲಿದೆ. ಆದ್ದರಿಂದ ಸಮುದಾಯದ ಯಾರೊಬ್ಬರೂ ಸಹ ಜಾತಿ ಗಣತಿ ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮನೋಭಾವನೆ ಹೊಂದಬಾರದು. ಸಮೀಕ್ಷೆದಾರರಿಗೆ ಸಹಕರಿಸಿ ತಮ್ಮ ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಡಿಡಿಪಿಯು ವೆಂಕಟರಾಮಯ್ಯ ಮಾತನಾಡಿ, ಜಾತಿ ಗಣತಿ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಎರಡರಲ್ಲೂ ಸಹ ಕುರುಬ ಎಂದು ನಮೂದಿಸಿ. ಮತ್ತೆ ಯಾವುದೇ ರೀತಿಯ ಆತಂಕ ಮತ್ತು ಗೊಂದಲಗಳಿಗೆ ಒಳಗಾಗದೆ ತಮ್ಮ ಜಾತಿಯನ್ನು ಕಡ್ಡಾಯವಾಗಿ ಕುರುಬ ಎಂದು ನಮೂದಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಯುವ ಮುಖಂಡ ಚನ್ನಾಪುರ ಕೋದಂಡರಾಮ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಸಂಖ್ಯೆ ರೈತರು ಮತ್ತು ಬಡ ವರ್ಗದವರು ಇದ್ದಾರೆ. ಕೆಲಸ ಕಾರ್ಯಗಳಿಗೆ ತಮ್ಮ ಹೊಲ ಗದ್ದೆಗಳ ಬಳಿಗೆ ಹೋಗಿರುತ್ತಾರೆ. ಆದ್ದರಿಂದ ಸಮೀಕ್ಷೆಗೆ ಬರುವ ಸಮಯದಲ್ಲಿ ತಿಳುವಳಿಕೆ ಉಳ್ಳವರು ಮನೆಯಲ್ಲಿ ಇದ್ದುಕೊಂಡು ಆ ಮನೆಯ ಎಲ್ಲರ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದರು.

ಕುರುಬ ಸಮುದಾಯದ ಮುಖಂಡರಾದ ಸಂಗೊಂಡಹಳ್ಳಿ ರಾದಣ್ಣ, ಗೌಡರ

ಶಿವಣ್ಣ, ಮೀಸೇ ಕೃಷ್ಣಪ್ಪ, ನಾರಾಯಣಪ್ಪ, ಚೀಕೂರು ಬೀರಪ್ಪಗೌಡ, ಅಗರ ಜಯಪ್ಪ, ಮೋತಕಪಲ್ಲಿ ನಾರಾಯಣ ಸ್ವಾಮಿ, ಬಂಡಹಳ್ಳಿ ಮಂಜುನಾಥ್, ಚೆನ್ನಾಪುರ ಕೋದಂಡರಾಮ, ರಂಗಣ್ಣ, ಕೆ.ಎನ್.ಗೋವಿಂದೇಗೌಡ, ಕೆ.ಎನ್.ತಾಯಲೂರಪ್ಪ, ಲೋಕೇಶ್, ಅಯ್ಯಪ್ಪ, ನಾಗರಾಜ್, ನಾರಾಯಣ ಸ್ವಾಮಿ, ಶಂಕರಪ್ಪ ಮತ್ತಿತರರು ಇದ್ದರು.

ಚಿತ್ರ : ಮುಳಬಾಗಿಲು ನಗರದ ಕುರುಬರ ಪೇಟೆಯಲ್ಲಿರುವ ಕನಕ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮುದಾಯ ಮುಖಂಡರ ಸಭೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande