ಕೋಲಾರ, ೨೦ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರೈತರಿಂದ ಸುಮಾರು ೭.೫೭ ಕೋಟಿಯಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದರಿಂದ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ನಷ್ಟದಲ್ಲಿ ನಡೆಯಬೇಕಾಗಿದೆ ಕೂಡಲೇ ರೈತರು ಸಾಲ ಮರುಪಾವತಿಗೆ ಮುಂದಾಗಿ ಬೇರೆ ರೈತರಿಗೆ ಹೊಸದಾಗಿ ಸಾಲ ನೀಡಲು ಸಹಕರಿಸಬೇಕಾಗಿದೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ನ ಅಧ್ಯಕ್ಷ ಕೆಂದಟ್ಟಿ ಎ.ಶಿವಕುಮಾರ್ ತಿಳಿಸಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ನಡೆದ ಬ್ಯಾಂಕ್ನ ೨೦೨೪?೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೊರಬಾಕಿಯು ಪಿಎಲ್ಡಿ ಬ್ಯಾಂಕ್ ಮತ್ತು ರಾಜ್ಯ ಬ್ಯಾಂಕ್ ಮಧ್ಯೆ ಸುಮಾರು ೪.೨೨ ಕೋಟಿ ಇದೆ ರೈತರು ಹೊರ ಬಾಕಿ ಸಾಲವನ್ನು ಕಟ್ಟಿದರೆ ಮಾತ್ರವೇ ಸರಿದೂಗಿಸಲು ಸಾಧ್ಯವಾಗುತ್ತದೆ ಅದರ ಮಧ್ಯೆ ಸುಮಾರು ೧.೧೫ ಕೋಟಿ ಸಾಲವನ್ನು ರೈತರಿಗೆ ನೀಡಲು ಬ್ಯಾಂಕ್ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಹಿರಿಯ ಸಹಕಾರಿ ಧುರೀಣರ ಆದರ್ಶ ಮತ್ತು ಮಾರ್ಗದರ್ಶನದಲ್ಲಿ ಬ್ಯಾಂಕ್ ಆಡಳಿತ?ನಡೆಸುತ್ತಿದೆ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ರೈತರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದಕ್ಕೆ ಎಲ್ಲರ ಸಹಕಾರ ಅಗತ್ಯ ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಮರುಪಾವತಿಸಿದರೆ ಮಾತ್ರ ಬ್ಯಾಂಕ್ನ ಅಭಿವೃದ್ಧಿ ಸಾಧ್ಯ ಎಂದರು.
ಕಸ್ಕಾರ್ಡ್ ಬ್ಯಾಂಕ್ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ ಬ್ಯಾಂಕ್ ನಲ್ಲಿ ಸುಮಾರು ೮ ಸಾವಿರ
ಷೇರುದಾರರು ಇದ್ದು ವಹಿವಾಟು ಸರಿಯಾಗಿ ನಡೆಯಬೇಕೆಂದರೆ ಒಂದು ಚಕ್ರ ಸಿಬ್ಬಂದಿ ಮತ್ತೊಂದು ಚಕ್ರ ರೈತರು ಎರಡು ಚಕ್ರಗಳು ಸರಿಯಾಗಿ ಹೋದರೆ ಸಂಸ್ಥೆ ಚೆನ್ನಾಗಿ ಬೆಳೆಯುತ್ತದೆ ಲೆಕ್ಕಪತ್ರಗಳು ಮುಕ್ತವಾಗಿವೆ ಅವುಗಳನ್ನು ಯಾವುದೇ ಸಮಯದಲ್ಲಾದರೂ ಬಂದು ಬ್ಯಾಂಕ್ ನಲ್ಲಿ ಮಾಹಿತಿಯನ್ನು ಪಡೆಯಬಹುದು ರೈತರು ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ ಬಡ್ಡಿ ಮನ್ನಾ ಆಗುತ್ತೆ ಅಂತ ಹೇಳಿ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಬ್ಯಾಂಕ್ ಉತ್ತಮ ವಹಿವಾಟು ಮಾಡಲು ಚೆನ್ನಾಗಿರುವ ರೈತರು ಪಿಗ್ಮಿ, ಡಿಪಾಸಿಟ್ ಕೊಡುವಂತೆ ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಎನ್ ಜಿ ಬ್ಯಾಟಪ್ಪ ಮಾತನಾಡಿ ಸಹಕಾರಿ ಸಂಸ್ಥೆಯನ್ನು ನಮ್ಮ ಧೀಮಂತ ನಾಯಕರಾದ ಬೈರೇಗೌಡರು, ವೆಂಕಟಗಿರಿಯಪ್ಪ ಶ್ರೀನಿವಾಸಗೌಡ ಬೆಳೆಸಿದ್ದಾರೆ ಸಂಸ್ಥೆ ಉಳಿಯಬೇಕು ರೈತರ ಅಭಿವೃದ್ಧಿಗೆ ಒತ್ತು ಕೊಡಿ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಕೊಡತ್ತಾ ಇದ್ದು ಅದನ್ನು ರೈತರು ತೆಗೆದುಕೊಂಡು ಸದುಪಯೋಗಪಡಿಸಿಕೊಂಡು ಸರಿಯಾಗಿ ಹಣ ಪಾವತಿ ಮಾಡಿ ಸಂಸ್ಥೆ ಉಳಿಸಿ ಹಳೇ ಸುಸ್ತಿದಾರರ ಪಟ್ಟಿಯನ್ನು ಜಿಬಿಎಂನಲ್ಲಿ ಪ್ರಕಟಿಸಬೇಕು ಅವರ ಸಂಬಂಧಿಕರು ಬಂದಿರುತ್ತಾರೆ ಅವರಿಗೆ ವಿಷಯ ತಿಳಿಸಿ ಲೋನ್ ಮರುಪಾವತಿ ಮಾಡಲು ಸಹಾಯ ಆಗುತ್ತೆ ಬೇರೆಯವರಿಗೆ ಹೊಸ ಸಾಲ ಕೊಡಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಂ.ವೆಂಕಟರಾಮ್, ನಿರ್ದೇಶಕರಾದ ಡೇರಿ ವೆಂಕಟೇಶ್, ವಿ.ಎ ಶಶಿಧರ್, ಬೈರೇಗೌಡ, ಮಂಜುನಾಥ್, ಕೆ.ಎಂ ವೆಂಕಟೇಶಪ್ಪ, ನರೇಶ್ ಬಾಬು, ಲಕ್ಷ್ಮಮ್ಮ, ಅಂಬಿಕಾ, ವೆಂಕಟರಾಮಪ್ಪ, ಮುನಿರತ್ನಮ್ಮ, ವೆಂಕಟಲಕ್ಷ್ಮಮ್ಮ, ಸುರೇಶ್ ಬಾಬು, ಸಿಇಒ ಶ್ರೀನಿವಾಸ್ ಸೇರಿದಂತೆ ರೈತರು ಸಿಬ್ಬಂದಿ ಇದ್ದರು.
ಚಿತ್ರ :ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ನಡೆದ ಬ್ಯಾಂಕ್ನ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಕೆಂದಟ್ಟಿ ಎ.ಶಿವಕುಮಾರ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್