ಪಾಕ್–ಸೌದಿ ರಕ್ಷಣಾ ಒಪ್ಪಂದದ ಪರಿಣಾಮ ಪರಿಶೀಲನೆ - ಭಾರತ
ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಸಹಿ ಹಾಕಲಾದ ಕಾರ್ಯತಂತ್ರದ ರಕ್ಷಣಾ ಒಪ್ಪಂದವು ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಯ ಮೇಲೆ ಬೀರುವ ಪರಿಣಾಮವನ್ನು ಭಾರತ ಸರ್ಕಾರ ಪರಿಶೀಲಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ವಕ್ತಾರ ರಣಧೀರ್ ಜೈ
ಪಾಕ್–ಸೌದಿ ರಕ್ಷಣಾ ಒಪ್ಪಂದದ ಪರಿಣಾಮ ಪರಿಶೀಲನೆ - ಭಾರತ


ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಸಹಿ ಹಾಕಲಾದ ಕಾರ್ಯತಂತ್ರದ ರಕ್ಷಣಾ ಒಪ್ಪಂದವು ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಯ ಮೇಲೆ ಬೀರುವ ಪರಿಣಾಮವನ್ನು ಭಾರತ ಸರ್ಕಾರ ಪರಿಶೀಲಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ವಕ್ತಾರ ರಣಧೀರ್ ಜೈಸ್ವಾಲ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಸಮಗ್ರ ಭದ್ರತೆಯನ್ನು ಖಾತ್ರಿಪಡಿಸಲು ಭಾರತ ಬದ್ಧವಾಗಿದೆ. ಈ ಬೆಳವಣಿಗೆಯ ಬಗ್ಗೆ ಸರ್ಕಾರಕ್ಕೆ ಈಗಾಗಲೇ ತಿಳಿದಿದ್ದು, ಇದು ಎರಡು ದೇಶಗಳ ನಡುವಿನ ದೀರ್ಘಾವಧಿಯ ಸಹಕಾರವನ್ನು ಔಪಚಾರಿಕಗೊಳಿಸುತ್ತದೆ” ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande