ಸೇನಾ ಮುಖ್ಯಸ್ಥರ ಲೈಕಾಬಾಲಿ ಭೇಟಿ – ಎಲ್‌ಒಸಿ ಯುದ್ಧ ಸನ್ನದ್ಧತೆ ಪರಿಶೀಲನೆ
ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಗುರುವಾರ ಅರುಣಾಚಲ ಪ್ರದೇಶದ ಲೈಕಾಬಾಲಿ ಸೇನಾ ನೆಲೆಗೆ ಭೇಟಿ ನೀಡಿ ಎಲ್‌ಒಸಿ ಉದ್ದಕ್ಕೂ ಭಾರತೀಯ ಸೇನೆಯ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದರು. ಈ ಸಂ
Visit


ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಗುರುವಾರ ಅರುಣಾಚಲ ಪ್ರದೇಶದ ಲೈಕಾಬಾಲಿ ಸೇನಾ ನೆಲೆಗೆ ಭೇಟಿ ನೀಡಿ ಎಲ್‌ಒಸಿ ಉದ್ದಕ್ಕೂ ಭಾರತೀಯ ಸೇನೆಯ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾರ್ಯತಂತ್ರದ ಮಹತ್ವದ ಮಿಲಿಟರಿ ಕಾರ್ಯಾಚರಣೆಗಳು, ಆಂತರಿಕ ಭದ್ರತಾ ಸನ್ನಿವೇಶ, ಇತರ ಭದ್ರತಾ ಸಂಸ್ಥೆಗಳೊಂದಿಗೆ ಏಕೀಕರಣ ಮತ್ತು ರಾಷ್ಟ್ರ ನಿರ್ಮಾಣ ಉಪಕ್ರಮಗಳ ಬಗ್ಗೆ ಹಿರಿಯ ಸೇನಾ ಅಧಿಕಾರಿಗಳು ವಿವರಿಸಿದರು. ಜನರಲ್ ದ್ವಿವೇದಿ ಅವರು ಭದ್ರತಾ ಮೂಲಸೌಕರ್ಯದಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಯೋಜನೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಶ್ಲಾಘಿಸಿದರು.

1962ರ ಯುದ್ಧದಿಂದಲೇ ತಾಂತ್ರಿಕ ಪ್ರಗತಿ ಹಾಗೂ ಕಠಿಣ ಭೂಪ್ರದೇಶದಲ್ಲಿ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸುವುದು ಸೇನೆಗೆ ಪ್ರಮುಖವಾಗಿದ್ದು, ಇಂದಿನ ಜಿಯೋಪಾಲಿಟಿಕಲ್ ಪರಿಸ್ಥಿತಿಯಲ್ಲಿ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. 2020ರ ಗಾಲ್ವಾನ್ ಘರ್ಷಣೆಯ ನಂತರ ಈ ಪ್ರದೇಶದಲ್ಲಿ 60,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ.

ಭಾರತದ 30ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಭೇಟಿಯು ಈಶಾನ್ಯ ಗಡಿಗಳಲ್ಲಿನ ಸೇನೆಯ ಉನ್ನತ ಮಟ್ಟದ ಸನ್ನದ್ಧತೆಯನ್ನು ದೃಢಪಡಿಸುವ ಹೆಜ್ಜೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande