ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪ್ರಾರಂಭವಾದ ಸೇವಾ ಪಖ್ವಾಡದ ಭಾಗವಾಗಿ ದೆಹಲಿಯಲ್ಲಿ ವಿಶೇಷ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಮ್ಮುಖದಲ್ಲಿ, 70 ಕ್ಕೂ ಹೆಚ್ಚು ದೇಶಗಳ 75 ರಾಯಭಾರಿಗಳು, ಹೈಕಮಿಷನರ್‌ಗಳು ಹಾಗೂ ಮಿಷನ್ ಮುಖ್ಯಸ್ಥರು ತಮ್ಮ ತಾಯಂದಿರ ಹೆಸರಿನಲ್ಲಿ ಸಸಿಗಳನ್ನು ನೆಟ್ಟರು.
ಏಕ್ ಪೆಡ್ ಮಾ ಕೆ ನಾಮ್ 2.0 ಅಭಿಯಾನದಡಿ ದೆಹಲಿಯ ಪಿಬಿಜಿ ಮೈದಾನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಭಾಗವಹಿಸಿದರು. ತಾಯಿ-ಮಕ್ಕಳ ಸಂಬಂಧವು ಭಾಷೆ ಅಥವಾ ಗಡಿಗಳ ಅಡ್ಡಿ ಮೀರಿ ಜಗತ್ತನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.
ಈ ವರ್ಷ ದೆಹಲಿ ಸರ್ಕಾರ 70 ಲಕ್ಷ ಮರಗಳನ್ನು ನೆಡುವ ಗುರಿ ಹೊಂದಿದೆ. ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಮರವನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೂ, ತಾಯಿ ಮತ್ತು ಭೂಮಾತೆಯ ಪ್ರತಿಯೊಬ್ಬರ ಮೇಲಿನ ಕೃತಜ್ಞತೆಯೂ ವ್ಯಕ್ತವಾಗುತ್ತದೆ ಎಂದು ಅವರು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa