ಗದಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಏಕತಾ ಸಮಾವೇಶದ ಕುರಿತು ಶಿವಯೋಗಿ ಮಂದಿರದಲ್ಲಿ ಪ್ರಥಮ ಬಾರಿಗೆ 200 ಕ್ಕೂ ಅಧಿಕ ಮಠಾಧೀಶರ ಸಮ್ಮುಖದಲ್ಲಿ ಸೆಪ್ಟಂಬರ್ 5 ರಂದು ಸಭೆ ನಡೆಸಲಾಯಿತು.
ನಂತರ ಸೆ. 11 ರಂದು ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಸೆ. 19 ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಸಲು ತಿರ್ಮಾನಿಸಲಾಗಿದೆ' ಅಂತ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಎರಡು ಒಂದೇ ಆಗಿದೆ. ಲಿಂಗಾಯತರು ಹಾಗೂ ವೀರಶೈವರು ಬಸವಣ್ಣನವರ ಅನುಯಾಯಿಗಳಾಗಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಜಾತಿ ಗಣತಿಯ ಕಾಲಂ ನಲ್ಲಿ ವೀರಶೈವ ಲಿಂಗಾಯತ ಅಂತ ನಮೂದಿಸಬೇಕು ಎನ್ನುವ ಉದ್ದೇಶದಿಂದ ಈ ಸಮಾವೇಶ ಮಾಡಲು ತಿರ್ಮಾನಿಸಲಾಗಿದೆ ಅಂತ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರ ಜಾತಿ ಜನಗಣತಿಯನ್ನು ಸೆಪ್ಟಂಬರ್ 22 ರಿಂದ ಆರಂಭ ಮಾಡಲಿದೆ. ಈ ಹಿಂದೆ ಕಾಂತರಾಜು ಆಯೋಗ ರಚನೆ ಮಾಡಿ 150 ಕೋಟಿ ಖರ್ಚು ಮಾಡಿ ಮಾಡಿತ್ತು. ವಿರೋಧದ ಬೆನ್ನಲ್ಲೆ ಈ ವರದಿಯನ್ನು ಕೈಬೀಡಲಾಯಿತು. ಈಗ ಮತ್ತೆ 420 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ಮಾಡಲಾಗುತ್ತಿದೆ. ಆದರೆ, ಹಿಂದೂ ಜಾತಿಗಳ ನಡುವೆ ಕ್ರಿಶ್ಚಿಯನ್ ಪದ ಸೇರಿಸಿ ಜಾತಿಗಳ ನಡುವೆ ಒಡಕು ಮೂಡಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಅಂತ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಬುದ್ದಿಜೀವಿಗಳು ಹಾಗೂ ಮಠಾಧೀಶರು ಸೇರಿಕೊಂಡು ಬಸವ ಧರ್ಮದ ಹೆಸರಿನಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಆದರೆ, ಸ್ವತಂತ್ರ ಧರ್ಮ ಮಾಡಲು ಸಾಧ್ಯವಿಲ್ಲ. ಲಿಂಗಾಯತರಲ್ಲಿ ಹಾಗೂ ವೀರಶೈವರಲ್ಲಿ ಗೊಂದಲ ಮೂಡಿಸುವ ಹುನ್ನಾರ ನಡೆಯುತ್ತಿದ್ದು, ಇದನ್ನು ಭಕ್ತರು ಅರ್ಥ ಮಾಡಿಕೊಳ್ಳಬೇಕಿದೆ. ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರವನ್ನು ಕೆಲವು ಮಠಾಧೀಶರು, ರಾಜಕಾರಣಿಗಳು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಯಾವ ಧರ್ಮಕ್ಕೂ ಕೇಂದ್ರ ಸರ್ಕಾರ ಮಾನ್ಯತೆ ನೀಡಿಲ್ಲ. ಲಿಂಗಾಯತ ಧರ್ಮ ಅಂತ ಹೊದರೇ ಆಗುವ ಕೆಲಸ ಆಗದಿರಬಹುದು. ಒಡೆದು ಹೋಗುವುದಕ್ಕಿಂತ ಕೂಡಿ ಹೋಗಬೇಕು ಎನ್ನುವುದೇ ಮಠಾಧೀಶರ ಬಯಕೆ ಆಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆ ವತಿಯಿಂದ ಸೆಪ್ಟಂಬರ್ 19 ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಎಲ್ಲ ಸಮುದಾಯದ ಪೂಜ್ಯರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೂರು ಸಾವಿರ ಮಠದಿಂದ ಪಾದಯಾತ್ರೆ ಆರಂಭಗೊಂಡು ನೆಹರೂ ಮೈದಾನ ತಲುಪಿ ಬೃಹತ್ ಏಕತಾ ಸಮಾವೇಶ ನಡೆಯಲಿದ್ದು, ಗದಗ ಜಿಲ್ಲೆಯಿಂದ 15 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಗದಗ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಾಭಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು. ಈ ವೇಳೆ ಹಲವರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP