ಕೋಲಾರ, ೧೭ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುವ ತಂದೆ ತಾಯಿ ದ್ಚಿಚಕ್ರ ವಾಹನದ ಮೂಲಕ ಹೊರಗಡೆ ಹೋಗುವ ಮುನ್ನ ಹೆಲ್ಮೇಟ್ ಧರಿಸುವಂತೆ ತಿಳಿಸಬೇಕು ಆಗ ಮಕ್ಕಳ ಮಾತನ್ನ ತಂದೆ ತಾಯಿ ಕೇಳುತ್ತಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಹೇಳಿದರು.
ಕೋಲಾರ ತಾಲ್ಲೂಕಿನ ಗಾಜಲದಿನ್ನೆ ಗ್ರಾಮದ ಬಳಿ ಇರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆರಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮನೆಯಲ್ಲಿ ಒಂದು ದ್ವಿಚಕ್ರ ವಾಹನ ಇದ್ದೆ ಇರುತ್ತದೆ ಹಾಗೆ ಮನೆಯಲ್ಲಿ ದ್ವಿಚಕ್ರ ಚಾಲನೆ ಮಾಡುವ ವಯಸ್ಕರು ಸೇರಿದಂತೆ ತಂದೆ ತಾಯಿಯಿಯೂ ಚಾಲನೆ ಮಾಡುವುದು ಸಾಮಾನ್ಯ ಆದರೆ ಮನೆಯಲ್ಲಿರುವ ಮಕ್ಕಳು ದ್ವಿಚಕ್ರ ವಾಹನ ಚಾಲನೆ ಮಾಡುವವರು ಹೆಲ್ಮೇಟ್ ಕಡ್ಡಾಯವಾಗಿ ಧರಿಸಿ ಚಾಲನೆ ಮಾಡುವಂತೆ ತಿಳಿಸಬೇಕು ಆಗ ಮಕ್ಕಳನ್ನು ಪ್ರೀತಿಸುವವರು ಅವರ ಮಾತನ್ನು ಕೇಳುವುದಲ್ಲದೆ ತಾವು ಸಹ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನು ಅರಿವಿನ ಬಗ್ಗೆ ಜಾಗೃತಿ ಮೂಡಿಸಿದರೆ ಅಪರಾದಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ದೇಶನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನು ಅರಿವು ಹೊಂದುವುದು ಮುಖ್ಯ ಎಂದರಲ್ಲದೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾದ ವಿಸ್ತಾರವಾಗುತ್ತಿದೆ ಸೈಬರ್ ವಂಚನೆಗೆ ಒಳಗಾಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಹಾಗಾಗಿ ಮಕ್ಕಳು ಮೊಬೈಲ್ ಗೀಳಿಗೆ ದಾಸರಾಗದೆ ವಿದ್ಯಾಭ್ಯಸದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ಸಂಚಾರಿ ನಿಯಮದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು ಮಹಿಳೆಯರು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೋಕ್ಸೋಕಾಯ್ದೆ ಸಹಕಾರಿಯಾಗಿದೆ ಎಂದು ಕಾನೂನಿನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ನಂತರ ವಸತಿ ಶಾಲೆಯ ಮುಗ್ದ ಮನಸ್ಸಿನ ಮಕ್ಕಳೊಟ್ಟಿಗೆ ಜಿಲ್ಲಾ ವರಿಷ್ಢಾಧಿಕಾರಿ ಮಗುವಾಗಿ ಬೆರೆದು ಮಕ್ಕಳ ಜೊತೆ ಸರತಿ ಸಾಲಿನಲ್ಲಿ ನಿಂತು ಊಟ ಪಡೆದು ಮಕ್ಕಳೊಟ್ಟಿಗೆ ಕುಳಿತ ಊಟ ಸವಿದರು.
ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ಮಹದೇವ್, ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಕೆ. ಕಾಂತರಾಜು, ಸಿಬ್ಬಂದಿ ಸೋಮಶೇಖರ್ ಭಾಗವಹಿಸಿದ್ದರು.
ಚಿತ್ರ : ಎಸ್.ಪಿ. ನಿಖಿಲ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್