ವಾಟರ್ ಹೀಟರ್ ಸ್ಪರ್ಶ, ವಿದ್ಯಾರ್ಥಿನಿ ಸಾವು
ವಾಟರ್ ಹೀಟರ್ ಸ್ಪರ್ಶ, ವಿದ್ಯಾರ್ಥಿನಿ ಸಾವು
ವಾಟರ್ ಹೀಟರ್ ಸ್ಪರ್ಶ, ವಿದ್ಯಾರ್ಥಿನಿ ಸಾವು


ಕೂಡ್ಲಿಗಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನೀರು ಕಾಯಿಸಲು ಬಕೆಟ್ ಒಳಗಡೆ ಇರಿಸಿದ್ದ ವಿದ್ಯುತ್ ಹೀಟರ್ ಸ್ಪರ್ಷವಾಗಿ ವಿದ್ಯಾರ್ಥಿನಿ ಕೆ.ಎಚ್. ಭಾಗ್ಯಶ್ರೀ (15) ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಕಕ್ಕುಪ್ಪಿ ಗ್ರಾಮದ ಕೆ. ಹುಲೇಶ್, ಅಂಬಿಕ ದಂಪತಿ ಪುತ್ರಿಯಾದ ಭಾಗ್ಯಶ್ರೀ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 9ನೇ ತರಗತಿ ಓದುತ್ತಿದ್ದಳು.

ಬುಧವಾರ ಬೆಳಗ್ಗೆ ಶಾಲೆಗೆ ಹೋಗಲು ವಾಟರ್ ಹೀಟರ್ ಅನ್ನು ಬಕೆಟ್ ಒಳಗಡೆ ಹಾಕಿ ನೀರು ಕಾಯಿಸಿಕೊಂಡು ಸ್ನಾನ ಮಾಡಿ, ನಂತರ ತನ್ನ ತಾಯಿಗೆ ನೀರು ಕಾಯಿಸಲು ಇಟ್ಟಿದ್ದರು.

ಆದರೆ ತನಗೆ ಈಗಲೇ ಬೇಡ, ಅದನ್ನು ತೆಗೆದು ಬಿಡು ಎಂದು ತಾಯಿ ಹೇಳಿದ್ದರಿಂದ ವಾಟರ್ ಹೀಟರ್ ಸ್ವೀಚ್ ಆಫ್ ಮಾಡದೆ ಹೀಟರನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಷವಾಗಿದೆ.

ವಿದ್ಯುತ್ ಶಾಕ್ ನಿಂದ ನೆಲಕ್ಕೆ ಬಿದ್ದು ಆಸ್ವಸ್ಥವಾಗಿದ್ದ ಭಾಗ್ಯಶ್ರೀಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆತರಲಾಗಿದೆ. ಬಾಲಕಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ.

ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಭೇಟಿ ಸಾಂತ್ವಾನ: ವಿಷಯ ತಿಳಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅಂತ್ಯ ಸಂಸ್ಕಾರಕ್ಕಾಗಿ ಸಹಾಯಧ ನೀಡಿ ಕುಟುಂಬದವರಿಗೆ ದೈರ್ಯ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande