ಕೋಲಾರ, ೧೭ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ರೈತರು ಅಭಿವೃದ್ಧಿಯಾಗಲು ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಸಲಕರಣೆಗಳನ್ನು ಸೊಸೈಟಿ ಮೂಲಕವೇ ಸಬ್ಸಿಡಿ ರೂಪದಲ್ಲಿ ನೀಡುವ ಮೂಲಕ ಹೊಸ ಬದಲಾವಣೆಗೆ ಸೊಸೈಟಿ ಸಿದ್ದತೆ ಮಾಡಿಕೊಂಡಿದ್ದು ಇದಕ್ಕೆ ರೈತರ ಸಹಕಾರವು ಮುಖ್ಯವಾಗಿದೆ ಎಂದು ವಕ್ಕಲೇರಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಪಾಲಾಕ್ಷಗೌಡ ತಿಳಿಸಿದರು.
ಕೋಲಾರ ತಾಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೊಸೈಟಿಗಳು ಕೇವಲ ಸಾಲ ಕೊಡುವುದು ಸಾಲವನ್ನು ಕಟ್ಟಿಸಿಕೊಳ್ಳುವುದಕ್ಕೆ ಅಷ್ಟೇ ಸೀಮಿತಗೊಳಿಸದೇ ರೈತರಿಗೆ ಉಪಯುಕ್ತವಾಗುವ ಸಲಕರಣೆಗಳನ್ನು ನೀಡಲು ಮುಂದಿನ ದಿನಗಳಲ್ಲಿ ಸಿದ್ದತೆ ಮಾಡಿಕೊಂಡಿದ್ದು ಈ ಕಟ್ಟಡ ಅದಕ್ಕೆ ಸೀಮಿತಗೊಳಿಸಲಾಗುತ್ತದೆ ಎಂದರು.
ಸಹಕಾರ ಸಂಘಕ್ಕೆ ಈಗಾಗಲೇ ಸರ್ಕಾರದಿಂದ ೧೫ ಕುಂಟೆ ಜಾಗವು ಮಂಜೂರು ಮಾಡಲಾಗಿದೆ. ಕಾರಣಾಂತರಗಳಿAದ ಸೊಸೈಟಿಗೆ ನೀಡಲಾಗಿಲ್ಲ ಮುಂದೆ ಜಿಲ್ಲಾಧಿಕಾರಿ ಯೊಂದಿಗೆ ಮಾತಾಡಿ ಆದಷ್ಟು ಬೇಗ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತದೆ ಅ ಜಾಗದಲ್ಲಿ ಗೊಬ್ಬರ ಸೇರಿದಂತೆ ಗೋದಾಮು ಮಾಡಿ ವಹಿವಾಟು ನಡೆಸಲಾಗುತ್ತದೆ ಎಂದರು
ಸಹಕಾರ ಸಂಘದಲ್ಲಿ ಈ ಸಾಲಿನಲ್ಲಿ ೨೧.೫೫ ಲಕ್ಷದಷ್ಟು ಲಾಭವನ್ನು ಗಳಿಸಿದೆ ಐದು ವರ್ಷದಲ್ಲಿ ಸುಮಾರು ೫೬೮ ರೈತರಿಗೆ ಸಾಲ ನೀಡುವ ಮೂಲಕ ಜಿಲ್ಲೆಗೆ ಮಾದರಿ ಸೊಸೈಟಿಯಾಗಿ ಮಾಡಿದ್ದೇವೆ. ರೈತ ಭವನದ ನಿರ್ಮಾಣಕ್ಕೆ ೩೫ ಲಕ್ಷದಷ್ಟು ದಾನಿಗಳ ಮೂಲಕವೇ ಪಡೆದಿದ್ದು ಉಳಿದ ೨೦ ಲಕ್ಷ ಕಟ್ಟಡ ನಿಧಿಯನ್ನು ಬಳಸಲಾಗಿದೆ ೧೫ ಕುಂಟೆ ಜಮೀನು ಇರುವ ರೈತರಿಗೂ ಸಾಲ ನೀಡಲಾಗಿದೆ ಮುಂದೆ ೧೦ ಕುಂಟೆ ಜಮೀನು ಇದ್ದ ರೈತರಿಗೂ ಸಾಲ ನೀಡಲು ಸಂಘದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಸಿಇಒ ಎಂ ಮಂಜುನಾಥ್ ಜಮಾ ಖರ್ಚು, ಲಾಭ ನಷ್ಟದ ವರದಿ ಮಂಡನೆ ಮಾಡಿದರು ವೇದಿಕೆಯಲ್ಲಿ ಉಪಾಧ್ಯಕ್ಷ ವಿ.ಮಂಜುನಾಥ್, ನಿರ್ದೇಶಕರಾದ ಎಂ.ಆನ0ದ್ ಕುಮಾರ್, ಆರ್.ಚಂದ್ರೇಗೌಡ, ವೆಂಕಟಗಿರಿಯಪ್ಪ, ಟಿ.ಮುನಿಯಪ್ಪ, ಜಿ.ಎಸ್ ಸದಾಶಿವಯ್ಯ, ಎಸ್.ಕೃಷ್ಣಪ್ಪ, ಬಿ.ಎನ್ ಚಿದಾನಂದ, ಎಂ ರಮೇಶ್, ಚೌಡಮ್ಮ, ಶಾಂತಕುಮಾರಿ, ಮಾಜಿ ಅಧ್ಯಕ್ಷ ಗೋಪಾಲಪ್ಪ ಸೇರಿದಂತೆ ರೈತರು, ಸಿಬ್ಬಂದಿ ವರ್ಗ ಇದ್ದರು.
ಚಿತ್ರ : ಕೋಲಾರ ತಾಲ್ಲೂಕು ವಕ್ಕಲೇರಿ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಪಾಲಾಕ್ಷಗೌಡ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್