ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮೀಸಲು ಅಗತ್ಯ
ರಾಯಚೂರು, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಮಾಜಿಕವಾಗಿ ಜಾರಿ ಮಾಡಿದವರು ಯಾರಾದರು ಈ ದೇಶದಲ್ಲಿದ್ದರೆ ಅವರೇ ದಿ. ಡಿ ದೇವರಾಜು ಅರಸು ಅವರು. ಯಾಕೆಂದರೆ ಅವರು ನಾಡಿನ ಮುಖ್ಯಮಂತ್ರಿಗಳಾಗಿ ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಲು ಪ್ರಾಮಾಣಿಕ
ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮೀಸಲು ಅಗತ್ಯ


ರಾಯಚೂರು, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಮಾಜಿಕವಾಗಿ ಜಾರಿ ಮಾಡಿದವರು ಯಾರಾದರು ಈ ದೇಶದಲ್ಲಿದ್ದರೆ ಅವರೇ ದಿ. ಡಿ ದೇವರಾಜು ಅರಸು ಅವರು. ಯಾಕೆಂದರೆ ಅವರು ನಾಡಿನ ಮುಖ್ಯಮಂತ್ರಿಗಳಾಗಿ ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದರು. ದೇಶದಲ್ಲಿ ಸಮಾನತೆಗಾಗಿ ಜನ ಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರಾತಿನಿಧ್ಯ ನೀಡಬೇಕಾಗಿದೆ ಎಂದು ಬೆಂಗಳೂರಿನ ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎ ನಾರಾಯಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಸವೇಶ್ವರ ಸಭಾ ಭವನದಲ್ಲಿ ಜಾಗೃತ ಕರ್ನಾಟಕ ಹಾಗೂ ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನದ ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2 ಎಂಬ ಶೀರ್ಷಿಕೆ ಅಡಿಯಲ್ಲಿ ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ನಡೆಯುವ ಸಮೀಕ್ಷೆ ಕೇವಲ ಜನರ ಎಣಿಕೆಯಲ್ಲ. ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯುವ ಪ್ರಕ್ರಿಯೆ. ಜಾತಿ ಸಮುದಾಯಗಳ ಸ್ಥಿತಿಗತಿ ಅರಿಯವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರದ ಯೋಜನೆಗಳು ರಾಜ್ಯ ಸರ್ಕಾರ ಕಳುಹಿಸಿಕೊಡುವ ಜಾತಿ ವಿವರಗಳನ್ನೇ ಆಧರಿಸಿದೆ. ಕೇಂದ್ರ ಸರ್ಕಾರವು ಜನಗಣತಿಯೊಂದಿಗೆ ನಡೆಸಲಿರುವ ಜಾತಿಗಣತಿ ಮತ್ತು ಕರ್ನಾಟಕ ಸರ್ಕಾರ ನಡೆಸಲಿರುವ ಸಾಮಾಜಿಕ. ಶೈಕ್ಷಣಿಕ ಸಮೀಕ್ಷೆ ಎರಡೂ ಒಂದೇ ಅಲ್ಲ. ಇವುಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ ಎಲ್ಲರು ಜಾಗೃತರಾಗಿ ಮಾಹಿತಿ ನೀಡಬೇಕು ಎಂದರು.

ಹಿಂದುಳಿದ ವರ್ಗವನ್ನು ಹಿಂದುಳಿದ ವರ್ಗದ ಕೆಲ ಮುದಾಳತ್ವದ ನಾಯಕೇ ಕಾಲೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ಅವಕಾಶ ದೊರಕಿಸುವಲ್ಲಿ ವಂಚಿಸಲಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ನಂತರ ರಾಯಚೂರು ಲೋಕಸಭೆ ಸಂಸದರಾದ ಜಿ ಕುಮಾರ ನಾಯಕ ಮಾತನಾಡಿ, ಸಂವಿಧಾನದಲ್ಲಿ ಎಲ್ಲಾ ಸಮಾನವಾಗಿ ಹಂಚಿಕೆಯ ಕುರಿತು ಬಾಬಾ ಸಾಹೇಬರು ಮೊದಲೆ ಹೇಳಿದ್ದಾರೆ. ಕೆಲ‌ ತಿದ್ದುಪಡಿಗಳ ಮೂಲಕ ಅಗತ್ಯವಿರುವ ಮೀಸಲಾತಿ ಪಡೆಯಬೇಕು ಎಂದರು.

ಹಿಂದುಳಿದ ವರ್ಗಗಳ ನ್ಯಾಯ ಸಮ್ಮತ ಮೀಸಲಾತಿಗಾಗಿ ಸಂಘಟಿತರಾಗಬೇಕಾಗಿದೆ. ಇಂತಹ ಕಾರ್ಯಕ್ರಮಗಳ‌ ಮೂಲಕ ಸಮುದಾಯಗಳ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನಂತರ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್‌ಕೆ‌ ಅತೀಕ್ ಅವರು ಮಾತನಾಡಿ, ಹಿಂದುಳಿದ ವರ್ಗದಲ್ಲಿ ಕೆಲವರಿಗೆ ಮಾತ್ರ ಅಧಿಕಾರಿ‌ ಸಿಗುತ್ತಿದೆ. ಆದರೇ ಅತೀ ಹಿಂದುಳಿದವರಿಗೆ ಸಾಮಾಜಿಕ ಅವಕಾಶಗಳು ಸಿಗಬೇಕಾದರೇ ಶೈಕ್ಷಣಿಕವಾಗಿ‌ ಬಲವರ್ಧನೆಗೊಳ್ಳಬೇಕಾಗಿದೆ. ಸಂವಿಧಾನದ ಆಶಯದಂತೆ ಸಮಾನವಾಗಿ ಎಲ್ಲರಿಗೂ ಅವಕಾಶಗಳು ಹಂಚಿಕೆಯಾಗುವ ಮೂಲಕ ಸಮ‌ಸಮಾಜದ ಕನಸು ನನಸು‌ಮಾಡಬೇಕಾಗಿದೆ. ಇದಕ್ಕೆ ರಾಜ್ಯದಾದ್ಯಂತ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಜಾಗೃತಗೊಳಿಸಬೇಕಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande