ರಾಜ್ಯ ಸರಕಾರದ ವಿರುದ್ದ ಆರ್.ಅಶೋಕ ವಾಗ್ದಾಳಿ
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಮತಾಂತರದ ರಾಯಭಾರಿ ಎಂದಿರುವ ಅವರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೈಸೂರು ದಸರಾ ಉದ್ಘಾಟನೆಗೂ ಕಾನೂನ
ರಾಜ್ಯ ಸರಕಾರದ ವಿರುದ್ದ ಆರ್.ಅಶೋಕ ವಾಗ್ದಾಳಿ


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಮತಾಂತರದ ರಾಯಭಾರಿ ಎಂದಿರುವ ಅವರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೈಸೂರು ದಸರಾ ಉದ್ಘಾಟನೆಗೂ ಕಾನೂನು ತರಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ತಾಲಿಬಾನ್, ಮುಲ್ಲಾಗಳ ಸರ್ಕಾರ ನಡೆದಿದೆ ಎಂದು ಆರೋಪಿಸಿದ್ದಾರೆ. ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಕಾನೂನುಗಳಿಲ್ಲ ಆದ್ದರಿಂದ ನ್ಯಾಯಾಲಯ ಅರ್ಜಿ ವಜಾ ಗೊಳಿಸಿದೆ ಎಂದರು.

ಮುಂಬರುವ ದಿನಗಳಲ್ಲಿ ಮುಸ್ಲಿಂರ ಹಬ್ಬಗಳಿಗೆ ನಾವು ಹಿಂದುಗಳನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿಸಲಾಗುವುದು ಎಂದಿದ್ದಾರೆ.

ಸಿದ್ದರಾಮಯ್ಯ ಅವರದ್ದು ಎಡಬಿಡಂಗಿ ಆಡಳಿತ ರಾಜ್ಯದಲ್ಲಿ ಇದರಿಂದ ಅರಾಜಕತೆ ಸೃಷ್ಟಿ ಆಗಿದೆ. ಧರ್ಮ- ಧರ್ಮಗಳ ನಡುವೆ ವಿಷ ಬೀಜ, ಬೆಂಕಿ ಹಚ್ಚುವುದು, ನಾಡು ಅಶಾಂತಿಯಿಂದಿರಬೇಕು‌ ಎಂದು ಕಾಂಗ್ರೆಸ್ ನವರು ಬಯಸುತ್ತಿದ್ದಾರೆ ಎಂದು ಆರ್ ಅಶೋಕ್​ ಕಿಡಿಕಾರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande