ಕೆಜಿಎಫ್ ನಲ್ಲಿ ಅದ್ದೂರಿಯಾಗಿ ನಡೆದ ಯುವ ಸೌರಭ ಕಾರ್ಯಕ್ರಮ
ಕೆಜಿಎಫ್ ನಲ್ಲಿ ಅದ್ದೂರಿಯಾಗಿ ನಡೆದ ಯುವ ಸೌರಭ ಕಾರ್ಯಕ್ರಮ
ಚಿತ್ರ :ಕೆಜಿಎಫ್ನಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ಭಾಗವಹಿಸಿದ್ದರು


ಕೋಲಾರ, ೦೬.ಆಗಸ್ಟ್ (ಹಿ.ಸ.)

ಆ್ಯಂಕರ್ : ಕೆಜಿಎಫ್ನಲ್ಲಿ ಜಿಲ್ಲಾಡಾಳಿತ ಜಿಲ್ಲಾ ಪಂಚಾಯತ್ ಕೋಲಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಶಾಸಕರಾದ ರೂಪಕಲಾ ಎಂ ಶಶಿಧರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಸಕಿ ರೂಪಲಾ ಎಂ ಶಶಿಧರ್ ಅವರು ಮಾತನಾಡಿ ನಮ್ಮ ನಾಡಿನ ಜಾನಪದ ಕಲೆ ನಶಿಸಿ ಹೋಗದಂತೆ ನೋಡಿಕೊಂಡು ಇಂದಿನ ಯುವ ಸಮದಾಯಕ್ಕೆ ಜಾನಪದ ಕಲೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.

ಇಂತಹ ಕಾರ್ಯಕ್ರಮಗಳಿಂದ ಜಾನಪದ ಕಲೆಯನ್ನೇ ನಂಬಿಕೊಂಡಿರುವವರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ನಮ್ಮ ನಾಡಿನ ಜಾನಪದ ಕಲೆ ಬಗ್ಗೆ ಈಗಿನ ಯುವ ಜನತೆಗೆ ಅರಿವು ಹಾಗೂ ಉತ್ಸಾಹ ಮೂಡಲು ಇಂತಹ ಕಾರ್ಯಕ್ರಮಗಳಿಂದ ಅವಕಾಶವಾಗಲಿದೆ ಎಂದರು.

ಕಾರ್ಯಕ್ರಮ ಆಯೋಜಿಸಿದ ಇಲಾಖೆ ಅಧಿಕಾರಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ತಮ್ಮ ಕಲೆ ಪ್ರದರ್ಶಿಸಲು ಬಂದಿರುವ ಎಲ್ಲಾ ಕಲಾವಿದರಿಗೆ ಅಭಿನಂದನೆಗಳನ್ನು ತಿಳಿಸಿದರು.

ಅನೇಕ ಗಣ್ಯರು ಹಾಗೂ ಯುವ ಕಲಾವಿದರು ಭಾಗವಹಿಸಿ ವಿವಿಧ ರೀತಿಯ ಸಂಗೀತ ಸಮೂಹ ನೃತ್ಯ, ಡೊಳ್ಳು ಕುಣಿತ, ತಮಟೆ, ಇನ್ನು ಅನೇಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ನಗರಸಭಾ ಅಧ್ಯಕ್ಷರಾದ ಇಂದಿರಾಗಾಂಧಿ ದಯಾಶಂಕರ್, ಧರ್ಮೇಂದ್ರ ,ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚಿತ್ರ : ಕೆಜಿಎಫ್ನಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande