ಶತಮಾನ ಕಂಡ ಶಾಲೆ ಆರಂಭಕ್ಕೆ ಒಂದು ವಾರ ಗಡುವು
ವಿಜಯಪುರ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಮುದ್ದೇಬಿಹಾಳ ಪಟ್ಟಣದ ಹೃದಯಭಾಗದಲ್ಲಿರುವ ಬಜಾರ ಸರ್ಕಾರಿ ಉರ್ದು ಶಾಲೆಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂದೆ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ಶಾಲೆಯ ಹಳೆ ವಿದ್ಯಾರ್
ಶಾಲೆ


ವಿಜಯಪುರ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮುದ್ದೇಬಿಹಾಳ ಪಟ್ಟಣದ ಹೃದಯಭಾಗದಲ್ಲಿರುವ ಬಜಾರ ಸರ್ಕಾರಿ ಉರ್ದು ಶಾಲೆಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂದೆ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸಿದರು.

ಇದು ಕಾನೂನು ಬಾಹೀರವಾಗಿದ್ದು, ಕೂಡಲೇ ಸರ್ಕಾರ ಇದನ್ನು ತಡೆದು, ಇಲ್ಲಿ ಪುನಃ ಶಾಲೆ ಆರಂಭಿಸಬೇಕು. ಈ ಜಾಗವನ್ನು ದಾನಿಯೊಬ್ಬರು ಶಾಲೆಗಾಗಿಯೇ ದಾನ ಮಾಡಿದ್ದಾರೆ. ಹಾಗಾಗಿ ಈ ಜಾಗ ಶಾಲೆಗೆ ಸೀಮಿತವಾಗಿದ್ದು, ಶಾಲೆ ಶಾಲೆಯಾಗಿಯೇ ಉಳಿಯಬೇಕು ಎಂದು ಸರ್ಕಾರದ ಕ್ರಮಕ್ಕೆ ಹಳೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಧರಣಿ ಸ್ಥಳಕ್ಕೆ ಆಗಮಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಅವರು ನಾನು ಈಗಾಗಲೆ ಈ ಶಾಲೆ ಆರಂಭಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೋರಾಟಗಾರರು ನೀವು ಯಾವುದೇ ರೀತೀಯ ಪತ್ರಗಳ ವ್ಯವಹಾರ ಆಗಲಿ ಅಥವಾ ಮಾಹಿತಿ ಆಗಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿಲ್ಲ. ನಾವು ಎರಡು ತಿಂಗಳಿಂದ ಈ ಶಾಲೆಯ ಕುರಿತು ನಿಮ್ಮ ಗಮನಕ್ಕೆ ತರುತಾನೆ ಇದೀವಿ. ಜೊತೆಗೆ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿವಿ. ಯಾವುದೇ ಕ್ರಮಕೈಂಡಿಲ್ಲಾ. ಆದ ಕಾರಣ ಸರ್ಕಾರದ ಹಂತದಲ್ಲಿ ಈ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಜೊತೆಗೆ ಈ ಜಾಗವನ್ನು ಬೇರೆಯವರ ಪಾಲಾಗುತ್ತಿದೆ ಎಂದು ಬಿಇಓ ವಿರುದ್ಧ ಕಿಡಿಕಾರಿದರು.

ಒಂದು ವೇಳೆ ಶಾಲೆ ಆರಂಭಿಸದೇ ಹೋದ್ರೆ ಮುಂದೆ ಉಗ್ರವಾದ ಹೋರಾಟ ನಡೆಸಬೆಕಾಗುತ್ತದೆ ಎಂದು ಹೇಳಿದರು.

ಆಗ ಸ್ಥಳದಲ್ಲಿಯೇ ಬಿಇಓ ಅವರು ಡಿಡಿಪಿಐ ಕೋಲಾರ್ ಅವರನ್ನು ದುರವಾಣಿ ಮೂಲಕ ಮಾತನಾಡಿದ್ರು. ಆಗ ಹೋರಾಟಗಾರರು ಕೂಡ ತಮ್ಮ ಬೇಡಿಕೆಯನ್ನು ಡಿಡಿಪಿಐ ಅವರಿಗೆ ತಿಳಿಸಿದರು. ಡಿಡಿಪಿ ಅವರು ನೀಡಿದ ಭರವಸೆ ಮೇರೆಗೆ ಹೋರಾಟಗಾರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande