ಕೆಜಿಎಫ್ ಹೊರವಲಯದ ಕಾಲುಲಹಳ್ಳಿ ಯಲ್ಲಿ ೧.೪೫ ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ
ಕೆಜಿಎಫ್ ಹೊರವಲಯದ ಕಾಲುಲಹಳ್ಳಿ ಯಲ್ಲಿ ೧.೪೫ ಕೋಟಿ ರೂ., ಕಾಮಗಾರಿಗೆ ಗುದ್ದಲಿ ಪೂಜೆ
ಚಿತ್ರ : ಕೆಜಿಎಫ್ ನಗರದ ಹೊರವಲಯದ ಘಟ್ಟುಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುಲಹಳ್ಳಿಯಲ್ಲಿ ಸುಮಾರು ೧.೪೫ ಕೋಟಿ ರೂಪಾಯಿ ಕಾಮಗಾರಿಗೆ ಶಾಸಕಿ ರೂಪಕಲಾ ಚಾಲನೆ ನೀಡಿದರು


ಕೋಲಾರ, ೦೬.ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೆಜಿಎಫ್ ತಾಲೂಕಿನ ನಗರ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫-೧೦ ಕಿ.ಮೀ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಅತಿ ಶೀಘ್ರದಲ್ಲೇ ಕೆಜಿಎಫ್ ತಾಲೂಕಿನದ್ಯಾಂತ ಮುಖ್ಯ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕಿ ಎಂ.ರೂಪಕಲಾ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರವಲಯದ ಘಟ್ಟುಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುಲಹಳ್ಳಿಯಲ್ಲಿ ಸುಮಾರು ೧.೪೫ ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು ಕೆಂಪಾಪುರ ಮುಖ್ಯ ರಸ್ತೆಯಿಂದ ಕಾಲುಲಹಳ್ಳಿ ವರೆಗೆ ಡಾಂಬರು ರಸ್ತೆ, ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಹಾಗೂ ಚಿಕ್ಕಕಳ್ಳಹಳ್ಳಿ, ಕೆಂಪಾಪುರ, ಚಂಬಾರಸನಹಳ್ಳಿ ಯಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ವಾಹನಗಳು , ವಿದ್ಯಾರ್ಥಿಗಳು, ವೃದ್ಧರು ಓಡಾಡಲು ಯೋಗ್ಯವಲ್ಲದೆ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರು. ಇದೀಗ ಗ್ರಾಮಸ್ಥರ ಬಹು ವರ್ಷಗಳ ಕನಸು ನನಸು ಮಾಡಲಾಗಿದೆ ಒಂದೆರಡು ತಿಂಗಳೊಳಗೆ ರಸ್ತೆಗಳು ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಘಟ್ಟುಮಾದಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಜಾ ಅಶೋಕ್, ಉಪಾಧ್ಯಕ್ಷ ಜಯರಾಮ ರೆಡ್ಡಿ, ಪಿಡಿಒ ವಿಜಿ ಕುಮಾರ್, ತಾಪಂ ಮಾಜಿ ಅಧ್ಯಕ್ಷೆ ಸುನಂದಮ್ಮ ರಾಮಕೃಷ್ಣ ರೆಡ್ಡಿ, ಮಾಜಿ ಸದಸ್ಯ ನಾರಾಯಣ ರೆಡ್ಡಿ, ಸದಸ್ಯ ಮೌಲಾ, ಬಾಲಕೃಷ್ಣ, ಮುನಿಸ್ವಾಮಿ, ಸೊಸೈಟಿ ಕಾರ್ಯದರ್ಶಿ ಶ್ರೀರಾಮ ರೆಡ್ಡಿ, ಮಾರಿಕುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಜಲಜಾಕ್ಷೀ ಶಿವ , ಸದಸ್ಯರಾದ ಜಗದೀಶ್, ರಾಧಪ್ಪ, ಮುಖಂಡರಾದ ರವಿ, ಏಕಾಂತ್, ಕಾರಿ ಪ್ರಸನ್ನ, ವಕೀಲ ಪದ್ಮನಾಭ ರೆಡ್ಡಿ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ಚಿತ್ರ : ಕೆಜಿಎಫ್ ನಗರದ ಹೊರವಲಯದ ಘಟ್ಟುಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುಲಹಳ್ಳಿಯಲ್ಲಿ ಸುಮಾರು ೧.೪೫ ಕೋಟಿ ರೂಪಾಯಿ ಕಾಮಗಾರಿಗೆ ಶಾಸಕಿ ರೂಪಕಲಾ ಚಾಲನೆ ನೀಡಿದರು

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande