ನಾಳೆ ಸ್ವಾಮಿನಾಥನ್ ಶತಮಾನೋತ್ಸವ, ಅಂತಾರಾಷ್ಟ್ರೀಯ ಸಮ್ಮೇಳನ
ನವದೆಹಲಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಐಸಿಎಆರ್ ಪುಸಾ ಸಂಸ್ಥೆಯಲ್ಲಿ ಗುರುವಾರ ಆರಂಭಗೊಳ್ಳುವ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಮ್ಮೇಳನವನ್ನುದ್ದೇಶಿಸಿ ಮಾತನಾಡಲಿದ್ದ
ನಾಳೆ ಸ್ವಾಮಿನಾಥನ್ ಶತಮಾನೋತ್ಸವ, ಅಂತಾರಾಷ್ಟ್ರೀಯ ಸಮ್ಮೇಳನ


ನವದೆಹಲಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಐಸಿಎಆರ್ ಪುಸಾ ಸಂಸ್ಥೆಯಲ್ಲಿ ಗುರುವಾರ ಆರಂಭಗೊಳ್ಳುವ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಮ್ಮೇಳನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

‘ನಿತ್ಯಹಸಿರು ಕ್ರಾಂತಿ: ಜೈವಿಕ ಸಂತೋಷದ ಹಾದಿ’ ಎಂಬ ಘೋಷ ವಾಕ್ಯ ಹೊಂದಿರುವ ಈ ಸಮ್ಮೇಳನವು, ಪ್ರೊ. ಸ್ವಾಮಿನಾಥನ್ ಅವರ ಜೀವನದ ಕೃತಿಸ್ಮರಣೆಯಾಗಿದೆ. ಅವರು ಆಹಾರ ಭದ್ರತೆಗಾಗಿ ಮಾಡಿದ್ದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ.

ವಿಜ್ಞಾನಿಗಳು, ನೀತಿ ನಿರ್ಮಾಪಕರು, ಅಭಿವೃದ್ಧಿ ತಜ್ಞರು ಮತ್ತು ನಾನಾ ವಿಭಾಗಗಳ ಪಾಲುದಾರರು ಕೃಷಿಯ ಭವಿಷ್ಯದ ಕುರಿತು ಚರ್ಚಿಸಲು ಈ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಜೀವವೈವಿಧ್ಯತೆ ಸಂರಕ್ಷಣೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕೃಷಿ, ಸುಸ್ಥಿರ ಜೀವನೋಪಾಯ ಮತ್ತು ಅಂಚಿನ ಸಮುದಾಯಗಳ ಒಳಗೊಳ್ಳುವಿಕೆ ಪ್ರಮುಖ ಚರ್ಚಾ ವಿಷಯಗಳಾಗಿವೆ.

ಈ ಸಂದರ್ಭದಲ್ಲಿ ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರ ಹೆಸರಿನಲ್ಲಿ ಆಹಾರ ಮತ್ತು ಶಾಂತಿ ಪ್ರಶಸ್ತಿಯನ್ನು ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಹಾಗೂ ವಿಶ್ವ ವಿಜ್ಞಾನ ಅಕಾಡೆಮಿ ಜಂಟಿಯಾಗಿ ಸ್ಥಾಪಿಸುತ್ತಿವೆ. ಈ ಪ್ರಶಸ್ತಿಯ ಪ್ರಥಮ ಪುರಸ್ಕೃತರಿಗೆ ಪ್ರಧಾನ ಮಂತ್ರಿ ಅವರು ಪ್ರಶಸ್ತಿ ಪ್ರದಾನ ಮಾಡುವರು.

ಈ ಪ್ರಶಸ್ತಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಭದ್ರತೆ, ಹವಾಮಾನ ನ್ಯಾಯ ಮತ್ತು ಶಾಂತಿ ಸ್ಥಾಪನೆಗೆ ವಿಜ್ಞಾನ ಮತ್ತು ತಳಮಟ್ಟದ ನವೋದ್ಯಮಗಳ ಮೂಲಕ ಕೊಡುಗೆ ನೀಡುವವರನ್ನು ಗೌರವಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande