ನವದೆಹಲಿ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯ ಕರ್ತವ್ಯ ಪಥದಲ್ಲಿ ಹೊಸದಾಗಿ ನಿರ್ಮಿಸಲಾದ ಕರ್ತವ್ಯ ಭವನ-3 ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಒಟ್ಟು 1.5 ಲಕ್ಷ ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ 850 ಕಚೇರಿ ಕೊಠಡಿಗಳಿದ್ದು, ಭೂಮಹಡಿಯೊಂದಿಗೆ ಏಳು ಮಹಡಿಗಳಾಗಿವೆ. ಇದು ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಹತ್ತು ಕೇಂದ್ರ ಸಚಿವಾಲಯ ಕಟ್ಟಡಗಳಲ್ಲಿ ಮೊದಲನೆಯದು.
ಈ ಕಟ್ಟಡವು ಜಿಆರ್ ಐಎಚ್-4 ರೇಟಿಂಗ್ ಹೊಂದಿರುವ ಹಸಿರು ಕಟ್ಟಡವಾಗಿದೆ. ಡಬಲ್ ಗ್ಲೇಜ್ಡ್ ಗಾಜು, ಸೌರಶಕ್ತಿ ಫಲಕಗಳು, ಮಳೆನೀರು ಸಂಗ್ರಹಣಾ ವ್ಯವಸ್ಥೆ, ತಾಪನ–ವಾತಾಯನ ನಿಯಂತ್ರಣ ವ್ಯವಸ್ಥೆ, ಸಂವೇದಕ ಆಧಾರಿತ ವಿದ್ಯುತ್ ನಿಯಂತ್ರಣ ವ್ಯವಸ್ಥೆ, ಇಂಧನ ಉಳಿತಾಯದ ಎಲ್ಇಡಿ ದೀಪಗಳು ಮುಂತಾದ ಸ್ಮಾರ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.
ಸಾಂಪ್ರದಾಯಿಕ ಕಟ್ಟಡಗಳೊಂದಿಗೆ ಹೋಲಿಸಿದರೆ, ಈ ಭವನ ಶೇಕಡಾ 30 ರಷ್ಟು ಕಡಿಮೆ ವಿದ್ಯುತ್ ಶಕ್ತಿ ಬಳಕೆ ಮಾಡುತ್ತದೆ. ಇಲ್ಲಿಯು ವಾರ್ಷಿಕವಾಗಿ 5.34 ಲಕ್ಷ ಯೂನಿಟ್ ಸೌರಶಕ್ತಿಯನ್ನು ಉತ್ಪಾದಿಸಲಿದೆ.
ಈ ಭವನದಲ್ಲಿ ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ಎಂಎಸ್‌ಎಂಇ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಜೊತೆಗೆ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಕಾರ್ಯನಿರ್ವಹಿಸಲಿದ್ದು, 2026ರ ಏಪ್ರಿಲ್ 30ರ ಒಳಗೆ ಎಲ್ಲ ಸಚಿವಾಲಯಗಳನ್ನು ಸ್ಥಳಾಂತರಿಸುವ ಉದ್ದೇಶವಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa