ಧರಾಲಿ ದುರಂತ ಸಂತ್ರಸ್ತರಿಗೆ ನೆರವಿಗೆ ಬದ್ಧ : ಮುಖ್ಯಮಂತ್ರಿ ಧಾಮಿ
ಉತ್ತರಕಾಶಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಧರಾಲಿಯಲ್ಲಿ ಸಂಭವಿಸಿದ ಭೀಕರ ನೈಸರ್ಗಿಕ ವಿಕೋಪದ ನಂತರ, ಪರಿಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ವೇಗಗೊಳಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚಿಸಿದ್ದಾರೆ. ಪರಿಸ್ಥಿತಿ ಕುರಿತು ತುರ್ತು ನಿರ್ವಹಣಾ ಕೇಂದ್ರದಿಂದ ಪರಿಸ್ಥಿತಿಯನ್ನು ಅವ
Dhami


ಉತ್ತರಕಾಶಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಧರಾಲಿಯಲ್ಲಿ ಸಂಭವಿಸಿದ ಭೀಕರ ನೈಸರ್ಗಿಕ ವಿಕೋಪದ ನಂತರ, ಪರಿಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ವೇಗಗೊಳಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚಿಸಿದ್ದಾರೆ. ಪರಿಸ್ಥಿತಿ ಕುರಿತು ತುರ್ತು ನಿರ್ವಹಣಾ ಕೇಂದ್ರದಿಂದ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಪೀಡಿತ ನಾಗರಿಕರಿಗೂ ಸರ್ಕಾರ ಸಂಪೂರ್ಣ ನೆರವನ್ನು ನೀಡುತ್ತದೆ,” ಎಂದು ಭರವಸೆ ನೀಡಿದರು. ಭಾರತೀಯ ವಾಯುಪಡೆಯ ಚಿನೂಕ್ ಮತ್ತು ಎಂಐ-17 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಗಳಿಗೆ ಸಜ್ಜುಗೊಳಿಸಲಾಗಿದ್ದು, ಅಗತ್ಯವಿದ್ದಲ್ಲಿ ತಕ್ಷಣ ಕಾರ್ಯೋನ್ಮುಖವಾಗಲಿದೆ ಎಂದು ಅವರು ತಿಳಿಸಿದರು.

ಧರಾಲಿ ಪ್ರದೇಶದಲ್ಲಿ ಈಗಾಗಲೇ ವೈದ್ಯಕೀಯ ಶಿಬಿರಗಳು ಹಾಗೂ ಆಹಾರ, ನೀರು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸರ್ಕಾರ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಎಲ್ಲ ಇಲಾಖೆಗಳನ್ನು ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande