ಸೆಪ್ಟೆಂಬರ್ 19ರಂದು ರೈಲ್ವೆ ನೌಕರರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ
ನವದೆಹಲಿ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : 8ನೇ ವೇತನ ಆಯೋಗ ರಚನೆಗೆ ಸರ್ಕಾರದಿಂದ ಇನ್ನೂ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ರೈಲ್ವೆ ನೌಕರರು ಸೆಪ್ಟೆಂಬರ್ 19 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅಖಿಲ ಭಾರತ ರೈಲ್ವೆ ಒಕ್ಕೂಟ ಘೋಷಿಸಿದೆ. ಎಐಆರ್ ಎಫ್ ಪ್ರಧಾನ ಕಾರ್ಯದರ್
Railway


ನವದೆಹಲಿ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : 8ನೇ ವೇತನ ಆಯೋಗ ರಚನೆಗೆ ಸರ್ಕಾರದಿಂದ ಇನ್ನೂ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ರೈಲ್ವೆ ನೌಕರರು ಸೆಪ್ಟೆಂಬರ್ 19 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅಖಿಲ ಭಾರತ ರೈಲ್ವೆ ಒಕ್ಕೂಟ ಘೋಷಿಸಿದೆ.

ಎಐಆರ್ ಎಫ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದು, ಈ ಪ್ರತಿಭಟನೆ ಶಾಂತಿಯುತವಾಗಿದ್ದು, ಸರ್ಕಾರದ ಗಮನ ಸೆಳೆಯುವುದು ಉದ್ದೇಶ. ಸರ್ಕಾರವು ತಕ್ಷಣವೇ ಅಧಿಸೂಚನೆ ಹೊರಡಿಸಿದರೆ ನೌಕರರ ಅಸಮಾಧಾನ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಭಟನೆಯ ದಿನಾಂಕವಾದ ಸೆಪ್ಟೆಂಬರ್ 19, 1968ರ ಐತಿಹಾಸಿಕ ರೈಲ್ವೆ ಮುಷ್ಕರದ ಸ್ಮರಣಾರ್ಥ ಕೂಡ ಆಗಿದೆ. ಆ ದಿನ ಕೇಂದ್ರ ಸರ್ಕಾರಿ ನೌಕರರು ಅಗತ್ಯಾಧಾರಿತ ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆಗಾಗಿ ಹೋರಾಟ ನಡೆಸಿದ್ದರು.

ಈ ಬಾರಿ ಕೂಡ ದೇಶದಾದ್ಯಂತ ಲಕ್ಷಾಂತರ ರೈಲ್ವೆ ನೌಕರರು ಪ್ರತಿಭಟನೆಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande