ಮುಂಬಯಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ತಮ್ಮ ಕುಟುಂಬದೊಂದಿಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಕಾ ರಾಜಾ ಗಣೇಶೋತ್ಸವ ಮಂಡಳಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು.
ರಾಜ್ಯದ ರಾಜಕೀಯ ಹಾಗೂ ಆಡಳಿತಾತ್ಮಕ ವಿಚಾರಗಳ ಕುರಿತು ಅಮಿತ್ ಶಾ ಅವರು ನಾಯಕರೊಂದಿಗೆ ಚರ್ಚಿಸಿ, ನಂತರ ಫಡ್ನವೀಸ್ ಅವರ ಅಧಿಕೃತ ನಿವಾಸ ವರ್ಷಾ ಬಂಗಲೆಯಲ್ಲಿ ಗಣೇಶನನ್ನು ಪೂಜಿಸಿದರು.
ಅಮಿತ್ ಶಾ ಅವರು ಆಶಿಷ್ ಶೇಲಾರ್ ಹಾಗೂ ಮುರ್ಜಿ ಪಟೇಲ್ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಗೂ ಭೇಟಿ ನೀಡಿದರು.
ಪ್ರತಿ ವರ್ಷ ಗಣೇಶೋತ್ಸವದ ಸಮಯದಲ್ಲಿ ಮುಂಬೈಗೆ ಬಂದು ಲಾಲ್‌ಬಾಗ್ ಕಾ ರಾಜಾ ದರ್ಶನ ಪಡೆಯುವ ಪರಂಪರೆ ಈ ಬಾರಿಯೂ ಮುಂದುವರಿದಿದ್ದು, ಈ ಬಾರಿ ಅವರ ಮೊಮ್ಮಗನೊಂದಿಗೆ ಕುಟುಂಬ ಸಮೇತರಾಗಿ ದರ್ಶನ ಪಡೆದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa