ಭಾರತ ಯಾರಿಗೂ ತಲೆಬಾಗುವ ದೇಶವಲ್ಲ: ಸಚಿವ ಮನೋಹರ್ ಲಾಲ್
ನವದೆಹಲಿ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : 2025-26ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.5 ರಿಂದ ಶೇ. 7.8ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ವೀಡಿಯೊ ಸಂದೇಶ ಹಂಚಿಕೊಂ
Manohar lal


ನವದೆಹಲಿ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : 2025-26ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.5 ರಿಂದ ಶೇ. 7.8ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ವೀಡಿಯೊ ಸಂದೇಶ ಹಂಚಿಕೊಂಡಿರುವ ಅವರು, ಈ ಸಾಧನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಶ್ರಮಶೀಲ ನಾಗರಿಕರನ್ನು ಅಭಿನಂದಿಸಿದ್ದಾರೆ. ಭಾರತ ತನ್ನ ಕಾಲಿನ ಮೇಲೆ ನಿಂತಾಗ ಹಿಂದಿರುಗಿ ನೋಡುವುದಿಲ್ಲ; ಯಾರಿಗೂ ತಲೆಬಾಗುವುದಿಲ್ಲ ಎಂದು ಸಚಿವ ಮನೋಹರ್ ಲಾಲ್ ಹೇಳಿದ್ದಾರೆ.

ಅಮೆರಿಕದ ಸುಂಕ ವಿವಾದದ ಹಿನ್ನೆಲೆಯಲ್ಲಿಯೇ ಈ ಅಂಕಿಅಂಶಗಳು ಬಂದಿರುವುದನ್ನು ಉಲ್ಲೇಖಿಸಿದ ಅವರು, ಜಾಗತಿಕ ಸವಾಲುಗಳ ನಡುವೆಯೂ ಸಾಧಿಸಿದ ಈ ಬೆಳವಣಿಗೆಯು ಭಾರತದ ಶಕ್ತಿಯ ಪ್ರತೀಕವೆಂದು ಬಣ್ಣಿಸಿದ್ದಾರೆ.

ಜಿಡಿಪಿ ಏರಿಕೆಗೆ ಉತ್ಪಾದನೆ, ಸೇವಾ ಮತ್ತು ಕೃಷಿ ವಲಯಗಳ ಉತ್ತಮ ಕಾರ್ಯಕ್ಷಮತೆ ಕಾರಣವಾಗಿದೆ. ಈ ವಲಯಗಳಲ್ಲಿ ಕಂಡ ಸುಧಾರಣೆಗಳು ಆರ್ಥಿಕತೆಗೆ ಬಲ ತುಂಬಿ, ಭಾರತದ ಜಿಡಿಪಿ ದರವನ್ನು 7.8% ತಲುಪುವಂತೆ ಮಾಡಿವೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande