ಕ್ವೆಟ್ಟಾ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಬಲೂಚಿಸ್ತಾನದ ಬೋಲಾನ್ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ವಾಯುದಾಳಿ ನಡೆಸಿವೆ ಎಂದು ಸ್ಥಳೀಯರು ಹಾಗೂ ಸಾಮಾಜಿಕ ಮಾಧ್ಯಮ ವರದಿಗಳು ತಿಳಿಸಿವೆ. ದಾಳಿ ಗೋನಿಪಾರಾ ಗುಡ್ಡಗಾಡು ಪ್ರದೇಶ, ಉರ್ದು ಬಾಗ್ ಮತ್ತು ಧದರ್ ಸುತ್ತಮುತ್ತ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಆದರೆ, ಈ ವರದಿಗಳನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಪಾಕಿಸ್ತಾನದ ಮಿಲಿಟರಿ ಮಾಧ್ಯಮ ವಿಭಾಗ ಅಥವಾ ಬಲೂಚ್ ಸಶಸ್ತ್ರ ಗುಂಪುಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಹಿಂದಿನಿಂದಲೂ ಬಲೂಚಿಸ್ತಾನದಲ್ಲಿ ಫೈಟರ್ ಜೆಟ್‌ಗಳ ಬಳಕೆ ನಡೆದಿರುವುದನ್ನು ಪಾಕಿಸ್ತಾನಿ ಅಧಿಕಾರಿಗಳು ನಿರಾಕರಿಸುತ್ತಿದ್ದರು. ಆದರೆ, ಈ ಬಾರಿ ಫೈಟರ್ ಜೆಟ್‌ಗಳ ಬಳಕೆ ದೃಢಪಟ್ಟರೆ, ಇಸ್ಲಾಮಾಬಾದ್ ಸಂಘರ್ಷವನ್ನು ಸಾಂಪ್ರದಾಯಿಕ ಯುದ್ಧವೆಂದು ಪರಿಗಣಿಸಲು ಪ್ರಾರಂಭಿಸಿದೆ ಎಂಬ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa